ಮಡಿಕೇರಿ | ಯಾವುದೇ ಕಾರಣಕ್ಕೂ ಲಾಕ್ ಡೌನ್ ಬೇಡ: ಪ್ರತಾಪ್ ಸಿಂಹ

Prasthutha|

ಮಡಿಕೇರಿ: ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಆತಂಕ ಸೃಷ್ಟಿಸಿದೆ. ಆದರೆ  ಸೋಂಕು ಹರಡುವುದನ್ನು ತಡೆಯಲು ಯಾವುದೇ ಕಾರಣಕ್ಕೂ ಲಾಕ್ ಡೌನ್ ನಂತಹ ಕಠಿಣ ನಿಯಮ ಜಾರಿ ಮಾಡುವುದು  ಬೇಡ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ತಮ್ಮದೇ ಸರ್ಕಾರವನ್ನು ಒತ್ತಾಯಿಸಿದರು.

- Advertisement -

ಸರ್ಕಾರಕ್ಕೆ ಜನರ ಜೀವ ಕಾಪಾಡುವುದು ಎಷ್ಟು ಮುಖ್ಯವೋ, ಅಷ್ಟೇ ಜೀವನವನ್ನು ಕಾಪಾಡುವುದು ಮುಖ್ಯ. ಈ ಅಲೆಯಲ್ಲಿ ಜೀವಕ್ಕೆ ಹಾನಿಯಿಲ್ಲ, ಆದರೆ ಜೀವನ ದುಸ್ಥರವಾಗಿದೆ. ಕೊರೊನಾ ಒಂದನೇ ಮತ್ತು ಎರಡನೇ ಅಲೆಗೆ ಸಿಲುಕಿ ಜನರು ಇನ್ನೂ ಸುಧಾರಿಸಿಕೊಳ್ಳುವ ಹಂತದಲ್ಲಿದ್ದಾರೆ. ಇನ್ನೂ ಕೆಲವು ಕುಟುಂಬ ಬೀದಿಗೆ ಬಿದ್ದಿದೆ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ಲಾಕ್ಡೌನ್ ಬೇಡ ಬದಲಿಗೆ ಆಸ್ಪತ್ರೆಯಲ್ಲಿ ಸೌಲಭ್ಯ ಹೆಚ್ಚಿಸಿ, ಜೊತೆಗೆ ಸೋಂಕು ಹರಡದಂತೆ ಎಚ್ಚರವಹಿಸಿ ಎಂದು ತಿಳಿಸಿದರು.

ಮೊದಲನೇ ಅಲೆಯಲ್ಲಿ ಆಸ್ಪತ್ರೆ ಸಮಸ್ಯೆ, ಎರಡನೇ ಅಲೆಯಲ್ಲಿ ಆಕ್ಸಿಜನ್, ವೆಂಟಿಲೇಟರ್ ಸಮಸ್ಯೆ ಇತ್ತು. ಆದರೆ ಮೂರನೇ ಅಲೆಯಲ್ಲಿ ಇದ್ಯಾವ ಸಮಸ್ಯೆಯೂ ಇಲ್ಲ ಎಲ್ಲವೂ ಬಗೆಹರಿದಿದೆ. ಕೊರೊನಾ ಹಿನ್ನೆಲೆಯಲ್ಲಿ ಆ ಕಾನೂನು ಈ ಕಾನೂನು ಅಂತಾ ಜನರನ್ನು ಸಂಕಷ್ಟಕ್ಕೆ ಸಿಲುಕಿಸಬೇಡಿ. ಮುಂಜಾಗ್ರತಾ ಕ್ರಮವಾಗಿ ಸೂಕ್ತ ಚಿಕಿತ್ಸೆ ನೀಡಲು ಹೆಚ್ಚು ಒತ್ತನ್ನು ನೀಡಿ ಎಂದು ಮನವಿ ಮಾಡಿದರು.

- Advertisement -

ಮೇಕೆದಾಟು ಸಂದರ್ಭದಲ್ಲಿ ಕೊರೊನಾ ಸ್ಫೋಟವಾದ ಕುರಿತು ಪ್ರತಿಕ್ರಿಯಿಸಿ, ಮುಖ್ಯಮಂತ್ರಿ ಅವರು ಮನವಿ ಮಾಡಿಕೊಂಡರು. ಇಷ್ಟಾದರೂ ಕಾಂಗ್ರೆಸ್ ಅವರು ಜನರನ್ನು ಸೇರಿಸಿ ಪಾದಯಾತ್ರೆಯನ್ನು ಮಾಡಿದ್ದಾರೆ. ಇನ್ನಾದರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದರು.

ಭಾಷೆಯ ಮೂಲಕ ರಾಜಕೀಯ ಮಾಡಬೇಡಿ, ಟಿಪ್ಪು ಸುಲ್ತಾನ್ ಒಬ್ಬರೂ ಕನ್ನಡ ವಿರೋಧಿ ಎಂದು ಗೊತ್ತಿದ್ದರೂ ಟಿಪ್ಪು ಜಯಂತಿಯನ್ನು ಮಾಡಲು ಹೊರಟಾಗ ನಾರಾಯಣಗೌಡರು ಮಾತೇ ಆಡಿಲ್ಲ. ಸಮಾಜದಲ್ಲಿ ಭಾಷೆಯನ್ನು ವಿಂಗಡಿಸಿ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಬೇಡ ಎಂದು ಕರವೇ ನಾರಾಯಣಗೌಡರ ವಿರುದ್ಧ ವಾಗ್ದಾಳಿ ನಡೆಸಿದರು.



Join Whatsapp