ಬಿಜೆಪಿ ಅಧಿಕಾರ ಇರುವ ರಾಜ್ಯಗಳಲ್ಲಿ ಐಟಿ ದಾಳಿಯಾಗಲ್ಲ: ಡಿಕೆ ಶಿವಕುಮಾರ್

Prasthutha|

ಬೆಂಗಳೂರು: ಬಿಜೆಪಿ ಅಧಿಕಾರ ಇರುವ ರಾಜ್ಯಗಳಲ್ಲಿ ಐಟಿ ದಾಳಿ ಆಗಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

- Advertisement -


ಐಟಿ ದಾಳಿ ಸಂಬಂಧ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯ ಇಲ್ಲದೆ ಐಟಿ ದಾಳಿ ಇರಲ್ಲ. ರಾಜಕೀಯ ಲಿಂಕ್ ಇರುತ್ತೆ. ಛತ್ತೀಸಗಢ್ ದಲ್ಲೂ ದಾಳಿ ಆಗಿದೆ ಎಂದರು.


ಐಟಿ ದಾಳಿಯಲ್ಲಿ ಸಿಕ್ಕ ಹಣ ಪಂಚ ರಾಜ್ಯಗಳ ಫಂಡಿಂಗ್ ಗೆ ಸಂಗ್ರಹ ಎಂಬ ಬಿಜೆಪಿ ಆರೋಪ ವಿಚಾರ ಪ್ರತಿಕ್ರಿಯಿಸಿ, ಅವರಿಗೆಲ್ಲ ರಿಯಾಕ್ಟ್ ಮಾಡಲ್ಲ. ಹಾದಿ ಬೀದಿಯಲ್ಲಿ ಮಾತಾಡೋರಿಗೆಲ್ಲ ರಿಯಾಕ್ಟ್ ಮಾಡೋದಕ್ಕೆ ಆಗಲ್ಲ. ಬೆಂಗಳೂರಿನ ಐಟಿ ದಾಳಿ ಬಗ್ಗೆ ನನಗೆ ಮಾಹಿತಿ ಗೊತ್ತಿಲ್ಲ. ಏನ್ ಆಗಿದೆ ಅಂತಾನೂ ಗೊತ್ತಿಲ್ಲ, ನನಗೆ ಯಾರೂ ಮಾಹಿತಿ ಕೊಟ್ಟಿಲ್ಲ. ರಾಜಕೀಯ ಇಲ್ಲದೆ ಇವೆಲ್ಲ ಆಗ್ತಾವಾ ಎಂದು ಡಿಕೆಶಿ ಪ್ರಶ್ನಿಸಿದರು.



Join Whatsapp