2021ರ ICC ಪುರುಷರ T-20 ತಂಡದಲ್ಲಿ ಭಾರತೀಯರಿಗಿಲ್ಲ ಸ್ಥಾನ: ಬಾಬರ್ ಅಝಮ್’ಗೆ ಸಾರಥ್ಯ

Prasthutha|

ದುಬೈ: 2021ರ ICC ಪುರುಷರ T-20  ತಂಡವನ್ನು ಪ್ರಕಟಿಸಲಾಗಿದ್ದು, ಟೀಮ್ ಇಂಡಿಯಾದ ಯಾವುದೇ ಆಟಗಾರ ICC ಪ್ರಕಟಿಸಿದ ತಂಡದಲ್ಲಿ ಸ್ಥಾನ ಗಿಟ್ಟಿಸಲು ವಿಫಲರಾಗಿದ್ದಾರೆ. ಪಾಕಿಸ್ತಾನದ ಯಶಸ್ವಿ ನಾಯಕ ಬಾಬರ್ ಅಝಮ್ ICC ಪ್ರಕಟಿಸಿದ ತಂಡದ ನಾಯಕನಾಗಿ ಆಯ್ಕೆ ಮಾಡಲಾಗಿದೆ.

- Advertisement -

ಬಾಬರ್ ಅಝಮ್ ಸೇರಿದಂತೆ ಪಾಕಿಸ್ತಾನದ ಮೂವರು ಆಟಗಾರರು, ದಕ್ಷಿಣ ಆಫ್ರಿಕಾದ ಮೂವರು, ಆಸ್ಟ್ರೇಲಿಯಾದ ಇಬ್ಬರು ಹಾಗೂ ಬಾಂಗ್ಲಾದೇಶ, ಶ್ರೀಲಂಕಾ, ಇಂಗ್ಲೆಂಡ್’ನ ತಲಾ ಓರ್ವ ಆಟಗಾರ 2021ರ ICC ಪುರುಷರ T-20  ತಂಡದಲ್ಲಿದ್ದಾರೆ.

2021ರ ICC ಪುರುಷರ T-20 ತಂಡ

- Advertisement -

ಜಾಸ್ ಬಟ್ಲರ್, ಮುಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಬಾಬರ್ ಅಝಮ್ (ನಾಯಕ), ಎಡೆನ್ ಮಾರ್ಕಮ್, ಮಿಚೆಲ್ ಮಾರ್ಶ್, ಡೇವಿಡ್ ಮಿಲ್ಲರ್ , ತಬ್ರೇಝ್ ಶಮ್ಸಿ, ಜಾಶ್ ಹ್ಯಾಝೆಲ್’ವುಡ್, ವಾನಿಂದು ಹಸರಂಗ, ಮುಸ್ತಫಿಝುರ್ ರಹ್ಮಾನ್, ಶಾಹಿನ್ ಅಫ್ರೀದಿ.

ಯುಎಇ-ಒಮಾನ್’ನಲ್ಲಿ ಆಯೋಜಿಸಲಾಗಿದ್ದ ICC T-20 ವಿಶ್ವಕಪ್’ ಪಂದ್ಯಾಕೂಟದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದ ಪಾಕಿಸ್ತಾನದ ನಾಯಕ ಬಾಬರ್ ಅಝಮ್, ಟೂರ್ನಿಯಲ್ಲಿ ಅತಿ ಹೆಚ್ಚು ರನ್’ಗಳಿಸಿದ ಆಟಗಾರನೆನಿಸಿದ್ದರು. ಇದುವರೆಗೂ 29 ಅಂತರಾಷ್ಟ್ರೀಯ T-20 ಪಂದ್ಯಗಳನ್ನಾಡಿರುವ ಬಾಬರ್, 37.56 ಸರಾಸರಿಯಲ್ಲಿ, 9 ಅರ್ಧ ಶತಕಗಳ ನೆರವಿನಿಂದ ಒಟ್ಟು 939 ರನ್’ಗಳಿಸಿದ್ದಾರೆ.

Join Whatsapp