ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶವಿಲ್ಲ: ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್

Prasthutha|

ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ ಒಂದು ದಿನವಾಗಲಿ, ಒಂದು ಕ್ಷಣವಾಗಲಿ ಕಾಮಣ್ಣನ ಪ್ರತಿಷ್ಠಾಪನೆಗೆ ಅವಕಾಶ ಇಲ್ಲ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ರಮಣ ಗುಪ್ತಾ ಖಡಾಖಂಡಿತವಾಗಿ ಹೇಳಿದ್ದಾರೆ.

- Advertisement -


ಹೋಳಿ ಹಬ್ಬ ಹಿನ್ನೆಲೆಯಲ್ಲಿ ಈದ್ಗಾ ಮೈದಾನದಲ್ಲಿ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಿ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಮೇಯರ್ ಈರೇಶ್ ಅಂಚಟಗೇರಿ ಆದೇಶವನ್ನು ಹೊರಡಿಸಿದ್ದರು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಈ ತೀರ್ಮಾನವನ್ನು ಪ್ರಕಟಿಸಿದ್ದಾರೆ.


ಹುಬ್ಬಳ್ಳಿ ದೊಡ್ಡ ನಗರವಾದ ಕಾರಣ ಬಂದೋಬಸ್ತ್ ಅನಿವಾರ್ಯವಾಗಿದೆ. ನೀವು ಮೊದಲೇ ಮನವಿ ಕೊಟ್ಟಿದ್ದರೆ, ಪೂರ್ವ ಸಿದ್ಧತೆ ಕೈಗೊಂಡು ಸಿಸಿಟಿವಿ ಅಳವಡಿಸಿ ಅನುಮತಿ ನೀಡಬಹುದು. ಆದರೆ ಈಗಾಗಲೇ ಹೋಳಿ ಕಳೆದಿದೆ, ನಗರದಲ್ಲಿ 472 ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಆದರೇ ಇವೆಲ್ಲ ಒಂದೇ ದಿನ ಪ್ರತಿಷ್ಠಾಪನೆ ಆಗಿವೆ. ಆದ್ದರಿಂದ ಇಲ್ಲಿ ಅವಕಾಶ ನೀಡಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

- Advertisement -


ಮಾರ್ಚ್ 12 ರಂದು ಪ್ರಧಾನಿ ಮಂತ್ರಿ ಮೋದಿ ಧಾರವಾಡಕ್ಕೆ ಬರುತ್ತಾರೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರಬಾರದು ಎಂಬ ಹಿನ್ನೆಲೆಯಲ್ಲಿ ಅನುಮತಿ ಕೊಡಲು ಆಗುವುದಿಲ್ಲ. ಈಗಾಗಲೇ ಅವರಿಗೆ ಮನವರಿಕೆ ಮಾಡಲಾಗಿದೆ. ಈ ಕುರಿತು ಗಜಾನನ ಉತ್ಸವ ಸಮಿತಿಗೆ ಅವರಿಗೆ ನಿರಾಕರಣೆ ಕುರಿತು ಹಿಂಬರಹ ನೀಡಲಾಗುವುದು ಎಂದರು.



Join Whatsapp