ಯಾವ ವಿದೇಶಿ ಶಕ್ತಿಗಳಿಗೂ ರಷ್ಯಾವನ್ನು ಏಕಾಂಗಿಯಾಗಿಸಲು ಸಾಧ್ಯವಿಲ್ಲ: ಪುಟಿನ್

Prasthutha|

ಮಾಸ್ಕೊ: ಯಾವುದೇ ಕಾರಣಕ್ಕೂ ವಿದೇಶಿ ಶಕ್ತಿಗಳಿಗೆ ರಷ್ಯಾವನ್ನು ಏಕಾಂಗಿಯಾಗಿಸಲು ಸಾಧ್ಯವಿಲ್ಲ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಗುಡುಗಿದ್ದಾರೆ.

- Advertisement -

ರಷ್ಯಾದ ಪೂರ್ವ ಭಾಗದಲ್ಲಿರುವ ‘ವೊಸ್ಟೊಚ್ನಿ’ ಬಾಹ್ಯಾಕಾಶ ಉಡ್ಡಯನ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ‘ರಷ್ಯಾ ತನ್ನಿಂತಾನೇ ಏಕಾಂಗಿಯಾಗಿರಲು ಇಚ್ಚಿಸುವುದಿಲ್ಲ. ಅದೇ ರೀತಿ ವಿಶ್ವದ ಯಾವುದೇ ದೇಶವೂ ರಷ್ಯಾವನ್ನು ಏಕಾಂಗಿಯಾಗಿಸಲು ಆಗದು ಎಂದು ಹೇಳಿದ್ದಾರೆ.

ಫೆಬ್ರವರಿ 24ರಲ್ಲಿ ಉಕ್ರೇನ್ ಮೇಲೆ ದಾಳಿ ಆರಂಭಿಸಿದ ಬಳಿಕ ಅಧ್ಯಕ್ಷ ಪುಟಿನ್ ಅವರು ರಾಜಧಾನಿ ಮಾಸ್ಕೊದ ಹೊರ ಭಾಗಕ್ಕೆ ಮೊದಲ ಬಾರಿ ಭೇಟಿ ನೀಡಿದ್ದಾರೆ.

- Advertisement -

ಬೃಹತ್‌ ರಾಷ್ಟ್ರವಾದ ರಷ್ಯಾವನ್ನು ಒಂಟಿಯಾಗಿಸುವುದು ಅಸಾಧ್ಯ. ನಮ್ಮ ಜೊತೆಗೆ ಸಹಕರಿಸುವ ದೇಶಗಳೊಂದಿಗೆ ನಾವು ಕಾರ್ಯ ನಿರ್ವಹಿಸುತ್ತೇವೆ’ ಎಂದು ಅವರು ಹೇಳಿದರು.



Join Whatsapp