ರೋಹಿಂಗ್ಯಾ ನಿರಾಶ್ರಿತರಿಗೆ ದೆಹಲಿಯಲ್ಲಿ ಫ್ಲಾಟ್ ಇಲ್ಲ: ಯೂ-ಟರ್ನ್ ಹೊಡೆದ ಕೇಂದ್ರ ಸರ್ಕಾರ

Prasthutha|

ನವದೆಹಲಿ: ದೆಹಲಿಯಲ್ಲಿ ರೋಹಿಂಗ್ಯಾ ಮುಸ್ಲಿಮರಿಗೆ EWS ಫ್ಲಾಟ್ ಗಳನ್ನು ನೀಡಲಾಗುವುದು ಎಂಬ ಸುದ್ದಿ ವಿವಾದವಾಗುತ್ತಿದ್ದಂತೆ ಕೇಂದ್ರ ಮೋದಿ ಸರ್ಕಾರ ಯೂ-ಟರ್ನ್ ಹೊಡೆದಿದ್ದು, ರೋಹಿಂಗ್ಯಾ ನಿರಾಶ್ರಿತರಿಗೆ ಫ್ಲಾಟ್ ನೀಡಲು ಯಾವುದೇ ನಿರ್ದೇಶನವನ್ನು ನೀಡಿಲ್ಲ ಎಂದು ಗೃಹ ಸಚಿವಾಲಯ (MHA) ಸ್ಪಷ್ಟಪಡಿಸಿದೆ. ಅಕ್ರಮ ವಿದೇಶಿಗರು ಅವರ ಪ್ರಸ್ತುತ ಸ್ಥಳದಲ್ಲಿಯೇ ಇರುವುದನ್ನು ಖಚಿತಪಡಿಸಿಕೊಳ್ಳಲು ದೆಹಲಿ ಸರ್ಕಾರಕ್ಕೆ ಸೂಚಿಸಿದೆ.

- Advertisement -

ರೋಹಿಂಗ್ಯಾ ಅಕ್ರಮ ವಿದೇಶಿಗರನ್ನು ಕಾನೂನಿನ ಪ್ರಕಾರ ಗಡಿಪಾರು ಮಾಡುವವರೆಗೆ ಬಂಧನ ಕೇಂದ್ರಗಳಲ್ಲಿ ಇರಿಸಲಾಗುವುದು ಮತ್ತು ಅವರು ವಾಸ್ತವ್ಯದ ಪ್ರಸ್ತುತ ಸ್ಥಳವನ್ನು ಬಂಧನ ಕೇಂದ್ರವೆಂದು ಘೋಷಿಸಲು ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ರೋಹಿಂಗ್ಯಾ ಅಕ್ರಮ ವಿದೇಶಿಯರ ಕುರಿತು ಕೆಲವು ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಗೆ ಸಂಬಂಧಿಸಿದಂತೆ ನವದೆಹಲಿಯ ಬಕ್ಕರ್ವಾಲಾದಲ್ಲಿ ರೋಹಿಂಗ್ಯಾ ಅಕ್ರಮ ವಲಸಿಗರಿಗೆ EWS ಫ್ಲಾಟ್ ಗಳನ್ನು ಒದಗಿಸಲು MHA ಯಾವುದೇ ನಿರ್ದೇಶನಗಳನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ ಎಂದು MHA ವಕ್ತಾರರು ತಿಳಿಸಿದ್ದಾರೆ.

Join Whatsapp