ಬಿಟ್ ಕಾಯಿನ್ ವಿಚಾರದ ತನಿಖೆಯಲ್ಲಿ ಲೋಪವಿಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

Prasthutha|

ಬೆಳಗಾವಿ: ಬಿಟ್ ಕಾಯಿನ್ ವಿಚಾರದ ತನಿಖೆಯಲ್ಲಿ, ಪೊಲೀಸರು ಅತ್ಯಂತ ಪಾರದರ್ಶಕ ಹಾಗೂ ಲೋಪರಹಿತ
ತನಿಖೆ ನಡೆಸಿದ್ದಾರೆ ಹಾಗೂ ಯಾರನ್ನೂ ರಕ್ಷಿಸುತ್ತಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ
ವಿಧಾನ ಪರಿಷತ್ ಗೆ ತಿಳಿಸಿದ್ದಾರೆ.

- Advertisement -

ಇಂದು ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆಯಲ್ಲಿ,ಕಾಂಗ್ರೆಸ್ ಸದಸ್ಯ ಯು ಬಿ ವೆಂಕಟೇಶ್ ಅವರ ಪ್ರಶ್ನೆಗೆ
ಉತ್ತರಿಸಿದ ಸಚಿವರು, ಪ್ರಕರಣದ ಆರೋಪಿಗಳೊಬ್ಬನಾದ ಶ್ರೀಕಿಯ ಮೇಲೆ ಯಾವುದೇ ರೀತಿಯ ದೈಹಿಕ ಅಥವಾ
ಮಾನಸಿಕ ಒತ್ತಡ ಹೇರಿಲ್ಲ, ತನಿಖೆ ಸಮರ್ಪಕವಾಗಿ ಹಾಗೂ ಪಾರದರ್ಶಕವಾಗಿ ನಡೆದಿದೆ ಎಂದರು.

ಬಿಟ್ ಕಾಯಿನ್ ಅನ್ನು ಪಡೆಯಲು, ಶ್ರೀಕಿಯನ್ನು ಬಳಸಿಕೊಳ್ಳಲಾಗಿದೆ ಹಾಗೂ ಡ್ರಗ್ಸ್ ಅನ್ನು ನೀಡಿದ್ದಾರೆ ಎಂಬ ಆರೋಪ ಆಧಾರ ರಹಿತವಾಗಿದೆ ಎಂದ ಸಚಿವರು, “ಆರೋಪಿ ಶ್ರೀಕಿ ಜೈಲು ವಾಸ ಮುಗಿಸಿ, ಹೊರ ಜಗತ್ತಿಗೆ ಸ್ವತಂತ್ರ ನಾಗಿ ಬಂದ ನಂತರ ಅಂತಹ ಯಾವುದೇ ಆರೋಪಗಳನ್ನು ಪೊಲೀಸರ ವಿರುದ್ಧ ಮಾಡಿಲ್ಲ.

- Advertisement -

“ಬಿಟ್ ಕಾಯಿನ್ ತನಿಖೆ ವಿಚಾರದಲ್ಲಿ ಯಾವ ಲೋಪವೂ ಆಗಿಲ್ಲ” ಎಂದ ಸಚಿವರು, “ಪೊಲೀಸರು ಶ್ರೀಕಿಗೆ ಹಿಂಸೆ ನೀಡಿದ್ದಾರೆ
ಎಂಬ ಆರೋಪ ಸತ್ಯಕ್ಕೆ ದೂರವಾದದ್ದ್ದು” ಎಂದು ಪುನರುಚ್ಚರಿಸಿದರು.

ಚರ್ಚೆಯಲ್ಲಿ ಭಾಗವಹಿಸಿದ, ಅರೋಗ್ಯ ಸಚಿವ ಡಾ ಕೆ ಸುಧಾಕರ್ ರವರು, ಶ್ರೀಕಿಯ ಅರೋಗ್ಯ ತಪಾಸಣೆಯಲ್ಲಿ
ಯಾವುದೇ ಲೋಪವಾಗಿಲ್ಲ ಸರ್ಕಾರ ವ್ಯವಸ್ಥಿತವಾಗಿಯೇ ತಪಾಸಣೆ ನಡೆಸಿದೆ. ಎಫ್ ಎಸ್ ಎಲ್ ವರದಿಗೆ
ಕಳುಹಿಸಿಕೊಡುವ ಮುನ್ನ ಬೌರಿಂಗ್ ಆಸ್ಪತ್ರೆಯಲ್ಲಿ ಕೋವಿಡ್ ತಪಾಸಣೆ ನಡೆಸಲಾಗಿದೆ ಎಂದೂ ಸಮಜಾಯಿಷಿ
ನೀಡಿದರು.

ಸರಕಾರದ ಉತ್ತರದಿಂದ ಸಮಾಧಾನಗೊಳ್ಳದ ಪ್ರತಿಪಕ್ಷದ ಸದಸ್ಯರು, ಇದೊಂದು ಗಂಭೀರ ಸಮಸ್ಯೆಯಾಗಿದೆ ಮತ್ತು ವಿಚಾರವನ್ನು ಚರ್ಚಿಸಲು ಅರ್ಧ ಗಂಟೆ ಅವಕಾಶ ಕೊಡಬೇಕೆಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಭಾಪತಿ ಬಸವರಾಜ್ ಹೊರಟ್ಟಿ ಸಮಯಕ್ಕಾಗಿ ಪ್ರತ್ಯೇಕ ಪತ್ರ ನೀಡಿದರೆ
ಪರಿಶೀಲಿಸುವೆ ಎಂದರು.

Join Whatsapp