ಸಂಸತ್ ಆವರಣದಲ್ಲಿ ಧರಣಿ, ಉಪವಾಸ, ಪ್ರತಿಭಟನೆಗೆ ಅವಕಾಶವಿಲ್ಲ: ರಾಜ್ಯಸಭಾ ಸಚಿವಾಲಯ

Prasthutha|

ನವದೆಹಲಿ: ಸಂಸತ್ ಭವನದ ಆವರಣದಲ್ಲಿ ಇನ್ನು ಮುಂದೆ ಪ್ರತಿಭಟನೆ, ಧರಣಿ, ಉಪವಾಸ ಅಥವಾ ಧಾರ್ಮಿಕ ಸಮಾರಂಭಗಳನ್ನು ನಡೆಸುವಂತಿಲ್ಲ ಎಂದು ರಾಜ್ಯಸಭಾ ಸಚಿವಾಲಯ ಹೊಸ ಸುತ್ತೋಲೆ ಹೊರಡಿಸಿದೆ.

- Advertisement -

ಸಂಸತ್ತಿನಲ್ಲಿ ಕೆಲವು ಪದಗಳನ್ನು ಬಳಕೆ ಮಾಡಬಾರದು ಎಂಬ ಸರ್ಕಾರದ ಆದೇಶದ ಬಗ್ಗೆ ಪ್ರತಿಪಕ್ಷಗಳ ಆಕ್ರೋಶದ ಮಧ್ಯೆ ಧರಣಿಗಳ ವಿರುದ್ಧದ ಈ ಸುತ್ತೋಲೆ ಬಂದಿದೆ ಮತ್ತು ಪ್ರತಿಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಿದೆ.

ಜುಲೈ 18 ರಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಮೊದಲು ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ಪಿ.ಸಿ ಮೋದಿ ಅವರು ಹೊರಡಿಸಿರುವ ನೂತನ ಬುಲೆಟಿನ್ ನಲ್ಲಿ ಈ ಸಂಬಂಧ ಸಂಸತ್ ಸದಸ್ಯರ ಸಹಕಾರ ಕೋರಲಾಗಿದೆ ಎಂದು ತಿಳಿಸಿದ್ದಾರೆ.

- Advertisement -

ಇನ್ನು ಮುಂದಕ್ಕೆ ಸಂಸತ್ ಸದಸ್ಯರು ಯಾವುದೇ ಪ್ರದರ್ಶನ, ಧರಣಿ, ಮುಷ್ಕರ, ಉಪವಾಸ ಅಥವಾ ಯಾವುದೇ ಧಾರ್ಮಿಕ ಸಮಾರಂಭವನ್ನು ನಡೆಸುವ ಉದ್ದೇಶಕ್ಕಾಗಿ ಸಂಸತ್ ಭವನದ ಆವರಣವನ್ನು ಬಳಸುವಂತಿಲ್ಲ ಎಂದು ನೂತವಾಗಿ ಬಿಡುಗಡೆಗೊಳಿಸಿದ ಬುಲೆಟಿನ್’ನಲ್ಲಿ ಉಲ್ಲೇಖಿಸಿದೆ.



Join Whatsapp