NRC ಜಾರಿಗೊಳಿಸುವ ತೀರ್ಮಾನ ತೆಗೆದುಕೊಂಡಿಲ್ಲ : ಕೇಂದ್ರ ಸರಕಾರ

Prasthutha|

ನವದೆಹಲಿ: ರಾಷ್ಟ್ರೀಯ ನಾಗರಿಕರ ನೋಂದಣಿ (NRC)ಯನ್ನು ದೇಶಾದ್ಯಂತ ಜಾರಿಗೊಳಿಸುವ ಕುರಿತು ಇದುವರೆಗೆ ಯಾವುದೇ ತೀರ್ಮಾನ ನಾವು ತೆಗೆದುಕೊಂಡಿಲ್ಲ ಎಂದು ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ನಿತ್ಯಾನಂದ ರಾಯ್‌ ಲೋಕಸಭೆಯಲ್ಲಿ ತಿಳಿಸಿದ್ದಾರೆ.

- Advertisement -

ಎನ್‌ಆರ್‌ಸಿ ಅನ್ನು ಅಸ್ಸಾಂನಲ್ಲಿ ಮಾತ್ರ ಜಾರಿಗೊಳಿಸಲಾಗಿದೆ. ಆದರೆ, ಇದನ್ನು ದೇಶಾದ್ಯಂತ ಜಾರಿಗೊಳಿಸುವ ಕುರಿತು ಅಂತಿಮ ನಿರ್ಧಾರವನ್ನು ನಮ್ಮ ಸರಕಾರ ತೆಗೆದುಕೊಂಡಿಲ್ಲ. ಅದರ ಕುರಿತಾದ ಚರ್ಚೆಗಳನ್ನೂ, ಸಿದ್ಧತೆಯನ್ನೂ ನಾವು ನಡೆಸಿಲ್ಲ,” ಎಂದು ಅವರು ಲಿಖಿತ ರೂಪದಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರಕಾರವು ಕಳೆದ ಡಿಸೆಂಬರ್ 2019 ರ ವೇಳೆ ದೇಶಾದ್ಯಂತ NRC, CAA ಕಾಯ್ದೆಗಳನ್ನು ಜಾರಿಗೊಳಿಸುವ ತೀರ್ಮಾನ ಕೈಗೊಂಡಿತ್ತು. ಆದರೆ ದೇಶಾದ್ಯಂತ ಇದರ ವಿರುದ್ಧ ಪ್ರಬಲ ಹೋರಾಟಗಳು, ಪ್ರತಿಭಟನೆಗಳು ಮೊಳಗಿತ್ತು. ಅಂತರಾಷ್ಟ್ರೀಯ ಮಟ್ಟದಲ್ಲೂ ಕೇಂದ್ರ ಸರಕಾರವು ಟೀಕೆಗೆ ಒಳಗಾಗಿತ್ತು. ಅಲ್ಲದೇ ಹಲವು ಪ್ರತಿಭಟನಾಕಾರರ ಸಾವಿಗೂ ಈ ಖಾಯ್ದೆ ಕಾರಣವಾಗಿತ್ತು.

Join Whatsapp