ನವದೆಹಲಿ: ದೇಶದಲ್ಲಿ ಹಸಿವಿನಿಂದ ಸಾವನ್ನಪ್ಪಿದವರ ಸಂಖ್ಯೆಯ ಇತ್ತೀಚಿನ ದತ್ತಾಂಶವನ್ನು ಒದಗಿಸಿ. ಹಸಿವು ಮುಕ್ತ ದೇಶವನ್ನಾಗಿಸಲು ರಾಷ್ಟ್ರೀಯ ಮಾದರಿ ಯೋಜನೆಯನ್ನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಸಿಜೆಐ ಎನ್.ವಿ.ರಮಣ ನೇತೃತ್ವದ ಪೀಠವು ಹಸಿವಿನಿಂದ ಸಾವು ಕುರಿತು 2015-16ರ ವರದಿಯನ್ನು ಸಲ್ಲಿಸದಿರುವ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದೆ. ದೇಶದಲ್ಲಿ ಹಸಿವಿನಿಂದ ಸಾವು ಸಂಭವಿಸಿಲ್ಲ ಎಂದು ನೀವು ಹೇಳುತ್ತೀರಾ? ನಾವು ಆ ಹೇಳಿಕೆಯನ್ನು ಅವಲಂಬಿಸಬಹುದೇ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದೆ.
ರಾಜ್ಯ ಸರ್ಕಾರಗಳು ಸಹ ಹಸಿವಿನಿಂದ ಸಾವನ್ನಪ್ಪಿದವರ ಕುರಿತು ವರದಿ ಮಾಡಿಲ್ಲ. ದೇಶದಲ್ಲಿ ಹಸಿವಿನಿಂದ ಸಾವು ಸಂಭವಿಸಿಲ್ಲ ಎಂದು ಅರ್ಥ ಮಾಡಿಕೊಳ್ಳಬೇಕೆ? ಭಾರತ ಸರ್ಕಾರವು ನಮಗೆ ಹಸಿವಿನಿಂದ ಸಾವನ್ನಪ್ಪಿರುವ ಬಗ್ಗೆ ಸೂಕ್ತ ಮಾಹಿತಿ ಮತ್ತು ದತ್ತಾಂಶ ನೀಡಬೇಕು. ನಮಗೆ ಮಾಹಿತಿ ನೀಡಲು ನಿಮ್ಮ ಅಧಿಕಾರಿಗಳನ್ನು ಕೇಳಿ ಎಂದು ಅಟರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರಿಗೆ ಕೋರ್ಟ್ ಸೂಚಿಸಿದೆ.