ಬಿಎಸ್​ವೈ, ವಿಜಯೇಂದ್ರ ಜೊತೆ ರಾಜಿ ಆಗಲ್ಲ: ಮತ್ತೆ ತಿರುಗಿಬಿದ್ದ ಯತ್ನಾಳ್

Prasthutha|

ಹಾವೇರಿ: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ತಿರುಗಿಬಿದ್ದಿದ್ದಾರೆ. ಅಪ್ಪ ಮಕ್ಕಳ ಕೊತೆಗೆ ರಾಜಿ ಆಗೋ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

- Advertisement -

ರಾಜೀ ಅವಶ್ಯಕತೆ ನನಗಿಲ್ಲ. ನಾನೇನು ಲೋಕಸಭಾ ಟಿಕೆಟ್ ಕೇಳಿದ್ದೀನಾ? ವಿಜಯೇಂದ್ರನಿಂದ ನನಗೇನೂ ಆಗಬೇಕಿಲ್ಲ. ಅವರ ಜೊತೆ ನನ್ನದು ಏನು ವ್ಯವಹಾರ ಇಲ್ಲ. ನರೇಂದ್ರ ಮೋದಿಯವರು ಮತ್ತೆ ಪ್ರಧಾನಿ ಆಗಬೇಕು ಅಷ್ಟೆ ಎಂದಿದ್ದಾರೆ.

ಅಪ್ಪ ಮಕ್ಕಳ ಇತಿಹಾಸ ಹೇಳುವೆ

- Advertisement -

ವಿಜಯೇಂದ್ರ ಅವರ ಉದ್ದೇಶ ಏನು? ಸೋಮಣ್ಣ ಅವರ ಮೇಲೆ ಏನು ಮಾಡಿದ್ದಾರೆ? ವಿಜಯಪುರದಲ್ಲಿ ಏನ್ ಮಾಡಿದ್ದಾರೆ? ಬೊಮ್ಮಾಯಿ ಸೋಲಿಸೋಕೆ ಏನ್ ಮಾಡಿದ್ದಾರೆ ? ಎಲ್ಲಾ ಇತಿಹಾಸ ಇದೆ. ಲೋಕಸಭಾ ಚುನಾವಣೆ ಬಳಿಕ ಇತಿಹಾಸ ಹೇಳ್ತೀನಿ ಎಂದು ಹೇಳಿದ್ದಾರೆ.

ಅಂಜಿ ಓಡಿ ಹೋಗಿ ರಾಜಿ ಆದ ಎಂದು ಹೇಳಬೇಡಿ.ಯಾವ ವಿಜಯೇಂದ್ರಗೂ ಅಂಜಲ್ಲ, ಅವರ ಅಪ್ಪನಿಗೂ ಅಂಜಲ್ಲ. ವಿಜಯೇಂದ್ರ ನೇತೃತ್ವದಲ್ಲಿ ಇಲ್ಲಿ ಚುನಾವಣೆಗೆ ಹೋಗ್ತಿಲ್ಲ. ಇಲ್ಲಿ ವಿಜಯೇಂದ್ರ ಪ್ರಶ್ನೆನೇ ಬರಲ್ಲ. ನರೇಂದ್ರ ಮೋದಿ ನೇತೃತ್ವದಲ್ಲಿ ಚುನಾವಣೆ ಹೋಗುತ್ತಿದ್ದೇವೆ ಎಂದು ಹೇಳಿದರು.

ಮೋದಿ ನೇತೃತ್ವದಲ್ಲಿ ಚುನಾವಣೆ

ವಿಜಯೇಂದ್ರ ಬರಲಿ, ಬಿಡಲಿ ನಾವು ಗೆಲ್ಲುತ್ತೇವೆ. ವಿಜಯೇಂದ್ರ ನೇತೃತ್ವದಲ್ಲಿ ಚುನಾವಣೆ ಅಲ್ಲ, ಇದು ಮೋದಿಯವರ ನೇತೃತ್ವ ಮತ್ತು ಅಯೋಧ್ಯೆ ಶ್ರೀರಾಮನ ಆಶೀರ್ವಾದದ ಮೇಲೆ‌ ನಡೆಯುತ್ತಿರುವ ಚುನಾವಣೆ ಎಂದು ಯತ್ನಾಳ್ ಇದೇ ಸಮಯ ಗುಡುಗಿದರು.

ಕೆಎಸ್ ಈಶ್ವರಪ್ಪರಿಗೆ ಸೆಟ್ಲಮೆಂಟ್ ಮಾಡ್ತೀನಿ ಎಂಬ ಡಿಕೆ ಶಿವಕುಮಾರ್ ಹೇಳಿಕೆ ಖಾರವಾಗಿ ಪ್ರತಿಕ್ರಿಯಿಸಿದ ಯತ್ನಾಳ್, ಅವರದ್ದು ಏನಿದೆ ಅಂತ ಗೊತ್ತಿದೆ. ಯಾರ್ಯಾರ ಜೊತೆಯಲ್ಲಿ ಸೆಟ್ಲಮೆಂಟ್ ಮಾಡ್ತಾರೆ ಅನ್ನೋದು ಗೊತ್ತಿದೆ ಎಂದು ಹೇಳಿದ್ದೂ ಗಮನ ಸೆಳೆದಿದೆ.



Join Whatsapp