ಬೆಂಗಳೂರು: ಉಚಿತ ಬಸ್ ಸೇವೆಯಿಂದ ನಮ್ಮ ಸಂಸ್ಥೆಗಳ ಮೇಲೆ ಯಾವುದೇ ಹೊರೆಯಾಗಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯರಿಗೆ ಅನುಕೂಲ ಆಗಲಿ ಎಂದು ಈ ಯೋಜನೆ ಜಾರಿಗೆ ತಂದೆವು. ಅನುಕೂಲ ಆಗುತ್ತಿದೆ. ಧಾರ್ಮಿಕ ಕ್ಷೇತ್ರಗಳಿಗೆ ಒಟ್ಟಿಗೆ ಹೋಗ್ತಿದ್ದಾರೆ. ಅದಕ್ಕೆ ಕೆಲ ಬಸ್ ಗಳು ರಶ್ ಆಗ್ತಿವೆ. 15 ದಿನದೊಳಗೆ ಒಂದು ಹಂತಕ್ಕೆ ಬರುತ್ತೆ ಎಂದು ಹೇಳಿದ್ದಾರೆ.
ಶಾಲಾ ವಿದ್ಯಾರ್ಥಿಗಳಿಗೆ, ಕೆಲಸಕ್ಕೆ ಹೋಗುವವರಿಗೆ ಈ ಯೋಜನೆ ನೆರವಾಗಿವೆ. ಶಕ್ತಿ ಯೋಜನೆಯಿಂದ ನಮ್ಮ ಸಂಸ್ಥೆಗಳಿಗೆ ಯಾವುದೇ ಆರ್ಥಿಕ ಹೊರೆಯಾಗಲ್ಲ. ಕೆಲವು ಬಸ್ ಗಳಲ್ಲಿ ನಕಲಿ ಆಧಾರ್ ತೋರಿಸಿ ಪ್ರಯಾಣ ಮಾಡ್ತಿರೋ ಬಗ್ಗೆಯೂ ಮಾತನಾಡಿದ ಸಚಿವರು, ನಮ್ಮ ಅಧಿಕಾರಿಗಳು ಅಲರ್ಟ್ ಆಗಿರಬೇಕು. ಅಕ್ರಮವಾಗಿ ನಕಲಿ ಮಾಡಿದ್ರ ಮೇಲೆ ದೂರು ನೀಡಿ, ಅವ್ರ ಮೇಲೆ ಕ್ರಮ ಆಗಬೇಕು ಅಂತ ನಮ್ಮ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದರು.