‘INDIA’ ಮೈತ್ರಿಕೂಟದಲ್ಲಿ ವೈಮನಸ್ಸಿಲ್ಲ: ನಿತೀಶ್‌ ಕುಮಾರ್‌

Prasthutha|

ಪಾಟ್ನಾ: ವಿಪಕ್ಷಗಳ ಒಕ್ಕೂಟವಾದ ‘INDIA’ದಲ್ಲಿ ಬಿರುಕು ಮೂಡಿದೆ. ಬಿಹಾರ ಸಿಎಂ ನಿತೀಶ್‌ ಕುಮಾರ್‌ ಒಕ್ಕೂಟದ ಸಭೆಯಲ್ಲಿ ವೈಮನಸ್ಸಿನ ಕಾರ ಭಾಗಿಯಾಗಲು ನಿರಾಕರಿಸಿದ್ದಾರೆ ಎನ್ನುವ ಸುದ್ದಿ ಕೇವಲ ವದಂತಿ ಮಾತ್ರ ಎಂದು ನಿತೀಶ್‌ ಕುಮಾರ್‌ ಸ್ಪಷ್ಟನೆ ನೀಡಿದ್ದಾರೆ.

- Advertisement -

ಪಂಚರಾಜ್ಯ ಚುನಾವಣೆಗಳ ಫ‌ಲಿತಾಂಶದ ಬಳಿಕ ವಿಪಕ್ಷಗಳ ಒಕ್ಕೂಟವಾದ ಇಂಡಿಯಾದ ಸಭೆಯನ್ನು ಡಿ.6 ಕ್ಕೆ (ಇಂದು) ಕರೆಯಲಾಗಿತ್ತು. ಆದರೆ ಆದರೆ, ಒಕ್ಕೂಟದ ಹಲವು ನಾಯಕರು ಭಾಗಿಯಾಗದ ಕಾರಣ ಸಭೆಯನ್ನು ನಿನ್ನೆ ಡಿ.17ಕ್ಕೆ ಮುಂದೂಡಲಾಗಿತ್ತು.

ಒಕ್ಕೂಟದ ನಾಯಕರ ನಡುವೆ ವೈಮನಸ್ಸಿರುವ ಕಾರಣಕ್ಕಾಗಿಯೇ ನಿತೀಶ್‌ ಸಹಿತ ಹಲವರು ಸಭೆ ನಿರಾಕರಿಸಿದ್ದಾರೆ ಎಂಬ ಮಾತೂ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ನಿತೀಶ್‌ ಸ್ಪಷ್ಟನೆ ನೀಡಿದ್ದು, ನನಗೆ ಜ್ವರ ಬಂದಿದ್ದ ಕಾರಣ ಸಭೆಗೆ ಹಾಜರಾಗಲು ಸಾಧ್ಯವಿಲ್ಲ ಎಂದಿದ್ದೆ. ಅದರ ಹೊರತಾಗಿ ಮತ್ತೆಲ್ಲವೂ ಕೇವಲ ವದಂತಿ ಮಾತ್ರ. ಇದೇ ತಿಂಗಳ 3ನೇ ವಾರಕ್ಕೆ ಸಭೆ ಮುಂದೂಡಲಾಗಿದೆ. ಆಗ ನಾನು ಖಂಡಿತವಾಗಿಯೂ ಭಾಗಿಯಾಗುತ್ತೇನೆ ಎಂದಿದ್ದಾರೆ.



Join Whatsapp