ನವದೆಹಲಿ: ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಬೋರ್ಡಿಂಗ್ ನೀಡಲು ಹೆಚ್ಚುವರಿ ಮೊತ್ತವನ್ನು ವಸೂಲಿ ಮಾಡುತ್ತಿರುವುದನ್ನು ಗಮನದಲ್ಲಿಟ್ಟುಕೊಂಡ ವಿಮಾನಯಾನ ಸಚಿವಾಲಯ, ಏರ್ಪೋರ್ಟ್ ಚೆಕ್ ಇನ್ ಕೌಂಟರ್’ನಲ್ಲಿ ಬೋರ್ಡಿಂಗ್ ಪಾಸ್ ನೀಡಲು ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸದಂತೆ ಎಲ್ಲಾ ಸಂಸ್ಥೆಗಳಿಗೆ ಸೂಚಿಸಿದೆ.
ಈ ಹೆಚ್ಚುವರಿ ಶುಲ್ಕವು ಏರ್’ಕ್ರಾಫ್ಟ್ ನಿಯಮಾವಳಿ 1937 ರ 135ರ ಅಡಿಯಲ್ಲಿ ನೀಡಲಾದ ಸೂಚನೆಗಳಿಗೆ ಅನುಗುಣವಾಗಿಲ್ಲ ಎಂಡು ಸಚಿವಾಲಯ ಸ್ಪಷ್ಟಪಡಿಸಿದ್ದು, ಇದನ್ನು ಸುಂಕ ಎಂದು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿದೆ.
ಪ್ರಯಾಣಿಕರು ವೆಬ್ ಚೆಕ್ ಇನ್ ಅನ್ನು ಪೂರ್ಣಗೊಳಿಸದಿದ್ದರೆ ಮತ್ತು ಏರ್’ಲೈನ್ ಕೌಂಟರ್’ನಲ್ಲಿ ಬೋರ್ಡಿಂಗ್ ಪಾಸ್ ನೀಡುವಂತೆ ಕೇಳಿದರೆ, ಬೋರ್ಡಿಂಗ್ ಪಾಸ್ ನೀಡಲು 200 ರೂ. ಹೆಚ್ಚುವರಿ ಸುಂಕವನ್ನು ವಿಧಿಸಲಾಗುತ್ತಿತ್ತು.
ಎಲ್ಲಾ ನಿಗದಿತ ವಿಮಾನಯಾನ ಸಂಸ್ಥೆಗಳನ್ನು ಉದ್ದೇಶಿಸಿ ಜುಲೈ 21, 2022 ರಂದು ಸಚಿವಾಲಯ ಹೆಚ್ಚುವರಿ ಶುಲ್ಕ ವಿಧಿಸದಂತೆ ತನ್ನ ಆದೇಶದಲ್ಲಿ ತಿಳಿಸಿದೆ.