ಶಾಸಕ ಹರೀಶ್ ಪೂಂಜಾ ವಿರುದ್ಧ ಕ್ರಮ ಏಕಿಲ್ಲ?: ರಿಯಾಝ್ ಕಡಂಬು

Prasthutha|

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳ್ತಂಗಡಿ ಶಾಸಕ ಪೂಂಜಾ ಒಬ್ಬ ರೌಡಿ ಶಾಸಕ. ಈತನ ರೌಡಿಸಮ್, ಧಮ್ಮಿ ಎಲ್ಲಾ ಠಾಣೆಗೆ ನುಗ್ಗಿ ಪೊಲೀಸ್‌ ಅಧಿಕಾರಿಗಳ ಮೇಲೆಯೇ ನಡೆಯೋದು? ಈ MLA ವಿರುದ್ಧ ಕ್ರಮಕೈಗೊಳ್ಳುವ ಒಬ್ಬ ಕೂಡ ಸರ್ಕಾರ & ಪೊಲೀಸ್ ಇಲಾಖೆಯಲ್ಲಿಲ್ಲವೇ ಎಂದು SDPI ಮುಖಂಡ ರಿಯಾಝ್ ಕಡಂಬು ಪ್ರಶ್ನಿಸಿದ್ದಾರೆ.

- Advertisement -

ಮುಸ್ಲಿಮರಾದರೆ ದಕ್ಷಿಣ ಕನ್ನಡದ ಪೋಲೀಸರು ಲಾಠಿನೂ ಬೀಸುತ್ತಾರೆ, ಗೋಲಿಬಾರ್ ಮಾಡಿ ಗುಂಡು ಹಾಕಿ ಕೊಂದೂ ಹಾಕುತ್ತಾರೆ ಎಂದ ರಿಯಾಝ್, ಆದರೆ BJP ಗೂಂಡಾ ಶಾಸಕ ಪೂಂಜಾ ಠಾಣೆಗೆ ನುಗ್ಗಿ ಪೋಲೀಸರಿಗೆ ಧಮ್ಕಿ ಹಾಕಿದರೂ, ಮೈಕ್ ಹಿಡಿದು ಪೊಲೀಸರ ಕಾಲರ್ ಹಿಡಿಯುತ್ತೇನೆ ಎಂದರೂ ಜಿಲ್ಲೆಯ ಪೋಲೀಸರು ಕನಿಷ್ಠ ಬಂಧಿಸಲು ಮುಂದಾಗಲ್ಲ ಅಲ್ಲವೆ SP ಸಾಬ್ರೆ ಎಂದು ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಶ್ನಿಸಿದ್ದಾರೆ.

ಕಲ್ಲಿನ ಅಕ್ರಮ ಗಣಿಗಾರಿಕೆ ಹಾಗೂ ಸ್ಫೋಟಕಗಳ ಅಕ್ರಮ ದಾಸ್ತಾನು ಹೊಂದಿದ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮೋರ್ಚಾದ ಬೆಳ್ತಂಗಡಿ ಮಂಡಲದ ಅಧ್ಯಕ್ಷ ಹಾಗೂ ರೌಡಿ ಶೀಟರ್ ಶಶಿರಾಜ್‌ ಶೆಟ್ಟಿಯನ್ನು ಬಂಧಿಸಿದಕ್ಕಾಗಿ ಪೊಲೀಸ್ ಠಾಣೆಯಲ್ಲಿ ಶಾಸಕ ಹರೀಶ್‌ ಪೂಂಜ ಪೊಲೀಸರಿಗೆ ಧಮ್ಕಿ ಹಾಕಿದ್ದರು. ಪೊಲೀಸರಿಗೆ ಬೆದರಿಕೆ ಒಡ್ಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಅದನ್ನು ವಿರೋಧಿಸಿ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಶಾಸಕ ಪೊಲೀಸರ ಕಾಲರ್ ಹಿಡಿಯೋಕೂ ಸಿದ್ಧ ಎಂದಿದ್ದಾರೆ.



Join Whatsapp