ದ್ವೇಷಭಾಷಣದ ಕುರಿತಂತೆ ಕನ್ನಡ ಟಿವಿ ಚಾನೆಲ್’ಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ: ಸಾಮಾಜಿಕ ಹೋರಾಟಗಾರರ ಆರೋಪ

Prasthutha|

ಕನ್ನಡದ ಹಲವು ಟಿವಿ ಚಾನೆಲ್ ಗಳ ವಿರುದ್ಧ ದೂರು ನೀಡಿದ ಸಂಘಟನೆ

- Advertisement -

ಬೆಂಗಳೂರು: ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಕನ್ನಡದ ಮಾಧ್ಯಮಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂದು ಸಾಮಾಜಿಕ ಹೋರಾಟಗಾರರು ಆರೋಪಿಸಿದ್ದಾರೆ.

ಇತ್ತೀಚೆಗೆ ದಿಗ್ವಿಜಯ್ ನ್ಯೂಸ್ ಚಾನೆಲ್ ನಲ್ಲಿ “ಭಯೋತ್ಪಾದನೆಗಿಂತ ಮತಾಂತರ ಭಯಾನಕ” ಎಂಬ ಶೀರ್ಷಿಕೆ ಅಡಿಯಲ್ಲಿ ಪ್ರಸಾರವಾದ ಕಾರ್ಯಕ್ರಮದಲ್ಲಿ ನಿರೂಪಕಿ ಮಮತಾ ಹೆಗ್ಡೆ ಎನ್ನುವವರು ಧಾರ್ಮಿಕ ಮತಾಂತರದ ಕುರಿತು ಚರ್ಚೆಯಲ್ಲಿ, ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಾಗ ಎಷ್ಟು ಹಣ ಬರುತ್ತದೆ ಎಂದು ಪ್ರಶ್ನಿಸಿ ವಿವಾದಕ್ಕೀಡಾಗಿದ್ದರು.
ಕ್ರಿಶ್ಚಿಯನ್ ಪಾದ್ರಿ ಮನೆಗೆ ಬಂದಾಗ ಏನು ಮಾಡಬೇಕೆಂದು ವೀಕ್ಷಕರಿಗೆ ತಿಳಿದಿಲ್ಲ. ಈ ಸಂದರ್ಭದಲ್ಲಿ ಪೊಲೀಸರಿಗೆ ಕರೆ ಮಾಡಿ ದೂರು ನೀಡುವಂತೆ ‘ಅಶುಭ ದ್ವನಿ’ ವಾಹಿನಿಯ ಆ್ಯಂಕರ್ ವೀಕ್ಷಕರಿಗೆ ಸಲಹೆ ನೀಡಿದ್ದರು.

- Advertisement -

ಮಾತ್ರವಲ್ಲ ಅವರ ಮತಾಂತರ ಯತ್ನ ಅಡಿಯಲ್ಲಿ ಪ್ರಕರಣ ದಾಖಲಿಸಲು ಪೊಲೀಸರಿಗೆ ಒತ್ತಡ ಹೇರಲು ಚಾನೆಲ್ ನಲ್ಲಿ ಪ್ರಸಾರವಾದ ಕಾರ್ಯಕ್ರಮದಲ್ಲಿ ಸಲಹೆ ನೀಡಿದ್ದರು. ಈ ನಡೆಯ ಮೂಲಕ ಮಾತ್ರ ಮತಾಂತರ ತಡೆಯಬಹುದು ಎಂಬ ಅಭಿಪ್ರಾಯವನ್ನು ಒಂದು ಜವಾಬ್ದಾರಿಯುತ ಮಾಧ್ಯಮದ ಪ್ರತಿನಿಧಿಯಾಗಿ ಬೇಜವಾಬ್ದಾರಿ ನಡೆಯನ್ನು ಪ್ರದರ್ಶಿಸಿ ಸಾರ್ವಜನಿಕರ ವ್ಯಾಪಕ ಟೀಕೆಗೆ ಗುರಿಯಾಗಿದ್ದರು.

ಇದೇ ಹಾದಿಯಲ್ಲಿ ಮುಂದುವರಿದ ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಮತಾಂತರ ವಿರುದ್ಧ ನಾಲ್ಕು ಕಾರ್ಯಕ್ರಮ ಪ್ರಸಾರ ಮಾಡಿ, ಕ್ರಿಶ್ಚಿಯನ್ನರು ಹಣ ಮತ್ತು ಮೋಸದ ಮೂಲಕ ಮತಾಂತರ ನಡೆಸುತ್ತಾರೆ ಎಂದು ಬಹಿರಂಗವಾಗಿ ಆರೋಪಿಸಿತ್ತು.
ಇದು ಕ್ರಿಶ್ಚಿಯನ್ ಸಮುದಾಯವನ್ನು ಗುರಿಯಾಗಿಸಿ ನಡೆಸಲಾಗುತ್ತಿರುವ ದಾಳಿಯ ಮಧ್ಯೆ, ಕಳೆದೊಂದು ವರ್ಷದಿಂದ ಕನ್ನಡ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಕೋಮು ದ್ವೇಷವನ್ನು ಹರಡುವ ಕಾರ್ಯಕ್ರಮದ ಒಂದೆರಡು ಉಹಾಹರಣೆಗಳಷ್ಟೆ.

ಇಂತಹ ದ್ವೇಷ ಭಾಷಣಗಳನ್ನು ಪ್ರಸಾರ ಪಡಿಸುತ್ತಿರುವ ಚಾನೆಲ್ ಗಳ ವಿರುದ್ಧ ಹಿರಿಯ ವಕೀಲರು, ಸಾಮಾಜಿಕ ಕಾರ್ಯಕರ್ತರು ಮತ್ತು ಶಿಕ್ಷಣ ತಜ್ಞರನ್ನು ಒಳಗೊಂಡಿರುವ ಕರ್ನಾಟಕ ಹೋರಾಟಗಾರರ ಸಂಘವು, ‘ದಿಗ್ವಿಜಯ್ ನ್ಯೂಸ್’ ಸೇರಿದಂತೆ ಹಲವು ಟಿ.ವಿ ಮಾಧ್ಯಮಗಳ ವಿರುದ್ಧ ಜಿಲ್ಲಾ ಮತ್ತು ರಾಜ್ಯ ಮಟ್ಟದ ಮೇಲ್ವಿಚಾರಣಾ ಸಮಿತಿಗೆ ದೂರು ಸಲ್ಲಿಸಿತ್ತು.

ಮಾತ್ರವಲ್ಲ ಪಬ್ಲಿಕ್ ಟಿವಿ, ಸುವರ್ಣ ಟಿ.ವಿ, ನ್ಯೂಸ್ 18 ಕನ್ನಡ, ಟಿ. ವಿ 9 ಕನ್ನಡ ಸೇರಿದಂತೆ ಕನ್ನಡ ಸುದ್ದಿ ವಾಹಿನಿಗಳು ಮತ್ತು ಟೈಮ್ಸ್ ನೌ ನಂತಹ ಇಂಗ್ಲಿಷ್ ಸುದ್ದಿ ವಾಹಿನಿಗಳ ವಿರುದ್ಧ ಒಟ್ಟು 17 ದೂರುಗಳನ್ನು ದಾಖಲಿಸಿದೆ. ಇದರಲ್ಲಿ ಎರಡು ದೂರುಗಳನ್ನು ಮಾತ್ರ ಸ್ವೀಕರಿಸಲಾಗಿದೆ ಎಂದು ಹೇಳಲಾಗಿದೆ. ಈ ಎಲ್ಲಾ ದೂರುಗಳ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದ್ವೇಷ ಭಾಷಣದ ವಿರುದ್ಧ ಅಭಿಯಾನದ ಸಂಯೋಜಕಿ ಮಾನವಿ ಅತ್ರಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಧಾರ್ಮಿಕ ಮತಾಂತರದ ಕುರಿತು ದಿಗ್ವಿಜಯ್ ಪ್ರಸಾರದ ವಿರುದ್ಧ ನೀಡಲಾದ ದೂರಿನಲ್ಲಿ ಆ್ಯಂಕರ್ ಮಮತಾ ಹೆಗ್ಡೆ ಅವರು ಸಳ್ಳುಸುದ್ದಿ ಹರಿಯಬಿಟ್ಟಿದ್ದಾರೆ ಮತ್ತು ಅಲ್ಪಸಂಖ್ಯಾತ ಧರ್ಮಗಳ ವಿರುದ್ಧ ಹಿಂದೂಗಳು ಹಗೆತ ನದ ಭಾವನೆಗಳನ್ನು ಬೆಳೆಸಬೇಕೆಂದು ಕರೆ ನೀಡಿದ್ದರು.

Join Whatsapp