ಮಂಗಳೂರು: ನಿಟ್ಟೆ ಡೀಮ್ಡ್ ವಿಶ್ವವಿದ್ಯಾನಿಲಯದ 12ನೇ ಘಟಿಕೋತ್ಸವು ನವೆಂಬರ್ 12ರಂದು ವಿವಿಯ ಕ್ಯಾಂಪಸ್ ನಲ್ಲಿ ನಡೆಯಲಿದೆ ನಿಟ್ಟೆ ಉಪಕುಲಪತಿ ಬಿ. ಸತೀಶ್ ಕುಮಾರ್ ಭಂಡಾರಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಜಿಸಿ ಮುಖ್ಯಸ್ಥರಾದ ಜಗದೀಶ್ ಕುಮಾರ್ ಘಟಿಕೋತ್ಸವದಲ್ಲಿ ಭಾಗವಹಿಲಿದ್ದಾರೆ. ನಿಟ್ಟೆ ವಿವಿ ಜಗತ್ತಿನಲ್ಲಿ 300ರೊಳಗೆ ಬರುವ ವಿಶ್ವವಿದ್ಯಾನಿಲಯ ಎಂದು ಹೇಳಿದರು.
ಈ ಬಾರಿ 921 ಮಂದಿಗೆ ಪದವಿ ಪ್ರದಾನ ನಡೆಯಲಿದೆ. 24 ಮಂದಿ ಪಿಎಚ್. ಡಿ. ಪದವಿ ಪಡೆಯಲಿದ್ದಾರೆ. ಅಲ್ಲದೆ ವಿಜ್ಞಾನಿ ಟಿ. ಎಸ್. ರಾವ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುವುದು ಎಂದು ಸಹಾಯಕ ಉಪಕುಲಪತಿ ಎಂ. ಎಸ್. ಮೂಡಿತ್ತಾಯ ತಿಳಿಸಿದರು.
ನಮ್ಮ ಸಂಸ್ಥೆಯಲ್ಲಿ 25% ಸೀಟುಗಳನ್ನು ಮೆರಿಟ್ ಆಧಾರದಲ್ಲಿ ನೀಡಲಾಗುತ್ತಿದೆ. ನಿಟ್ಟೆ ಕಾಮನ್ ಎಂಟ್ರೆನ್ಸ್ ಪರೀಕ್ಷೆ ಮೂಲಕ ಸರಕಾರಿ ಕೋಟಾ, ಕ್ರೀಡಾ ಕೋಟಾ ಇತ್ಯಾದಿ ಸಹ ನೀಡಲಾಗುತ್ತದೆ ಎಂದು ಸಹ ಕುಲಪತಿ ವಿವರಿಸಿದರು.
ನಮ್ಮದು ವೈದ್ಯಕೀಯ ಅಲ್ಲದೆ, ಎಂಜಿನಿಯರಿಂಗ್, ಮ್ಯಾನೇಜ್ಮೆಂಟ್ ಮತ್ತು ಜರ್ನಲಿಸಂ ಎಂದು ಹಲವು ಕೋರ್ಸ್ಗಳು ಆರಂಭವಾಗಿದೆ. ನಿಟ್ಟೆ ಕ್ಯಾಂಪಸ್ ಸೇರಿ ನಮ್ಮ ವಿದ್ಯಾರ್ಥಿಗಳ ಸಂಖ್ಯೆ 11 ಸಾವಿರ. ಬೆಂಗಳೂರು ಕ್ಯಾಂಪಸ್ ಆರಂಭವಾಗಲಿದ್ದು, ಮುಂದಿನ ದಿನಗಳಲ್ಲಿ ನಮ್ಮ ವಿದ್ಯಾರ್ಥಿಗಳ ಸಂಖ್ಯೆಯು 20 ಸಾವಿರ ಮುಟ್ಟುತ್ತದೆ ಎಂದು ಅವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಿಜಿಸ್ಟ್ರಾರ್ ಹರ್ಷ ಹಾಲಹಳ್ಳಿ, ಪರೀಕ್ಷಾ ವಿಭಾಗದ ಡಾ. ಪ್ರಕಾಶ್ ಶೆಟ್ಟಿ ಅವರು ಉಪಸ್ಥಿತರಿದ್ದರು.