ನಿತಿಶ್ ಕುಮಾರ್ ಮೋದಿ ಪಾದ ಮುಟ್ಟಿ ಬಿಹಾರಕ್ಕೆ ಅವಮಾನ ಮಾಡಿದ್ದಾರೆ: ಪ್ರಶಾಂತ್ ಕಿಶೋರ್

Prasthutha|

ಭಾಗಲ್ಪುರ: ‘ನಮ್ಮ ರಾಜ್ಯದ ನಾಯಕ ನಮಗೆ ಹೆಮ್ಮೆ. ಆದರೆ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ದೆಹಲಿಗೆ ಹೋಗಿ ನರೇಂದ್ರ ಮೋದಿ ಕಾಲಿಗೆರಗಿದ್ದು ಬಿಹಾರಕ್ಕೆ ಮಾಡಿದ ಅವಮಾನವಾಗಿದೆ’ ಎಂದು ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ ಹೇಳಿದರು.

- Advertisement -


‘ಜನ್ ಸೂರಜ್’ ಅಭಿಯಾನದ ಭಾಗವಾಗಿ ಭಾಗಲ್ಪುರದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಿಶೋರ್, ‘2025ರ ವಿಧಾನಸಭಾ ಚುನಾವಣೆಯ ನಂತರವೂ ಬಿಜೆಪಿಯ ಬೆಂಬಲದೊಂದಿಗೆ ತಾನು ಅಧಿಕಾರದಲ್ಲಿ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ನಿತೀಶ್ ಕುಮಾರ್, ಮೋದಿ ಅವರ ಕಾಲಿಗೆರಗಿದ್ದಾರೆ’ ಎಂದು ಕಿಡಿಕಾರಿದರು.


‘ಈ ಹಿಂದೆ ನಿತೀಶ್ ಕುಮಾರ್ ಅವರೊಂದಿಗೆ ಕೆಲಸ ಮಾಡಿದ ನಾನು ಈಗ ಏಕೆ ಅವರನ್ನು ಟೀಕಿಸುತ್ತಿದ್ದೇನೆ ಎಂದು ಜನ ನನ್ನನ್ನು ಕೇಳುತ್ತಾರೆ. ಆಗ ನಿತಿಶ್ ಕುಮಾರ್ ವಿಭಿನ್ನ ವ್ಯಕ್ತಿಯಾಗಿದ್ದರು. ಅವರ ಆತ್ಮಸಾಕ್ಷಿಯನ್ನು ಮಾರಾಟಕ್ಕೆ ಇಟ್ಟಿರಲಿಲ್ಲ’ ಎಂದರು.

Join Whatsapp