ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ: ಜೆಡಿಯು – ಆರ್ ಜೆಡಿ ಸರ್ಕಾರ ಖಚಿತ

Prasthutha|

ಪಟ್ನಾ: ಜೆಡಿ(ಯು) ಪಕ್ಷಕ್ಕೆ ಆರ್.ಸಿ.ಪಿ. ಸಿಂಗ್ ರಾಜೀನಾಮೆ ಸಲ್ಲಿಸಿದ ಬಳಿಕ ಬಿಹಾರದಲ್ಲಿ ರಾಜಕೀಯ ಬಿಕ್ಕಟ್ಟು ಉಲ್ಬಣಗೊಂಡಿದ್ದು, ಬಿಜೆಪಿ ಮೈತ್ರಿ ತೊರೆದು ಆರ್ ಜೆಡಿ ಜೊತೆ ಸರ್ಕಾರ ರಚನೆಗೆ ನಿತೀಶ್ ಕುಮಾರ್ ಮುಂದಾಗಿರುವುದರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

- Advertisement -

ಆರ್ ಜೆಡಿ ಶಾಸಕ ತೇಜಸ್ವಿ ಅವರೊಂದಿಗೆ ಆಗಮಿಸಿ ರಾಜ್ಯಪಾಲರನ್ನು ಭೇಟಿಯಾದ ನಿತೀಶ್ ಕುಮಾರ್ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಇದರೊಂದಿಗೆ ಬಿಜೆಪಿ- ಜೆಡಿಯು ಸರ್ಕಾರ ಪತನವಾದಂತಾಗಿದೆ.

ಬಿಹಾರದಲ್ಲಿ ಮುಂದೆ ಆರ್ ಜೆಡಿ -ಜೆಡಿಯು ಸರ್ಕಾರ ಅಧಿಕಾರಕ್ಕೆ ಬರುವುದು ನಿಚ್ಛಳವಾಗಿದೆ.



Join Whatsapp