ಬಜೆಟ್ ಸಭೆಯಲ್ಲಿ ಭಾಗವಹಿಸುವಂತೆ ಸಿಎಂ ಸಿದ್ದರಾಮಯ್ಯಗೆ ಸಚಿವೆ ನಿರ್ಮಲಾ ಪತ್ರ

Prasthutha|

- Advertisement -

ಬೆಂಗಳೂರು: ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜುಲೈನಲ್ಲಿ ಬಜೆಟ್‌ ಮಂಡಿಸಲಿದ್ದಾರೆ.

ಈ ಬೆನ್ನಲ್ಲೆ ಕರ್ನಾಟಕದ ಸಿಎಂ ಸಿದ್ದರಾಮಯ್ಯಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸಿತಾರಾಮನ್ ಪತ್ರ ಬರೆದು ಕೇಂದ್ರದ (ಪೂರ್ವ ಬಜೆಟ್) ಪ್ರೀ ಬಜೆಟ್ ಸಭೆಯಲ್ಲಿ ಭಾಗವಹಿಸಲು ಆಹ್ವಾನಿಸಿದ್ದಾರೆ.

- Advertisement -

ಜೂ.22ರಂದು ದೆಹಲಿಯಲ್ಲಿ ನಡೆಯುವ ಪ್ರೀ ಬಜೆಟ್ ಸಭೆಯಲ್ಲಿ ರಾಜ್ಯದ ಪರ ಭಾಗವಹಿಸಲು ಸಿಎಂಗೆ ಆಹ್ವಾನ ನೀಡಲಾಗಿದ್ದು ನಿರ್ಮಲಾ ಸೀತರಾಮನ್ ಪತ್ರಕ್ಕೆ ಸಿಎಂ ಸಹ ಪ್ರತಿಕ್ರಿಯೆ ನೀಡಿದ್ದಾರೆ. ಸಭೆಯಲ್ಲಿ ಭಾಗಿಯಾಗಲು ಅಹ್ವಾನಿಸಿದ್ದಕ್ಕೆ ಧನ್ಯವಾದಗಳು. ಜೂ.22ರಂದು ಪೂರ್ವ ನಿಯೋಜಿತ ಕಾರ್ಯಕ್ರಮ ನಿಗದಿಯಾಗಿದೆ. ಹಾಗಾಗಿ ನಾನು ಮೀಟಿಂಗ್​​ನಲ್ಲಿ ಭಾಗಿಯಾಗಲು ಸಾಧ್ಯವಿಲ್ಲ. ನನ್ಮ ಬದಲು ನನ್ನ ಸಂಪುಟದ ಸಹೋದ್ಯೋಗಿ ಸಚಿವ ಕೃಷ್ಣಭೈರೇಗೌಡ ಭಾಗಿ ಆಗ್ತಾರೆ ಎಂದು ಸಚಿವೆ ನಿರ್ಮಲಾ ಸೀತರಾಮನ್ ಪತ್ರಕ್ಕೆ ಸಿಎಂ ಉತ್ತರ ನೀಡಿದ್ದಾರೆ.

Join Whatsapp