ಬೆಂಗಳೂರು: ಕೇಂದ್ರ ಮಾಜಿ ಸಚಿವ ದಿವಂಗತ ಬಾಬಾಗೌಡ ಪಾಟೀಲ್ ಅವರ ನೇತೃತ್ವದ ಅಖಂಡ ಕರ್ನಾಟಕ ರೈತ ಸಂಘದ ನೂತನ ಅಧ್ಯಕ್ಷರಾಗಿ ಬೀದರ್ ಜಿಲ್ಲೆಯ ರೈತ ನಾಯಕ ನಿರ್ಮಲ ಕಾಂತ ಪಾಟೀಲ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಅಖಂಡ ಕರ್ನಾಟಕ ರೈತ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಸುದೀರ್ ಕುಮಾರ್ ಮಾತನಾಡಿ, ಬಾಬಾಗೌಡ ಪಾಟೀಲ್ ನಿಧನ ನಂತರ ಇದುವರೆಗೂ ರಾಜ್ಯಾಧ್ಯಕ್ಷರ ನೇಮಕಾತಿ ನಡೆದಿರಲಿಲ್ಲ. ಬೀದರ್ ನ ರೈತ ನಾಯಕರಾದ ನಿರ್ಮಲ ಕಾಂತ ಪಾಟೀಲ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ನಿರ್ಮಲ ಕಾಂತ ಪಾಟೀಲ್ ಮಾತನಾಡಿ, ಪ್ರೊ. ನಂಜುಡ ಸ್ವಾಮಿ ಹುಟ್ಟು ಹಾಕಿದ ಸಂಘಟನೆ ತನ್ನ ಅರ್ಥಕಳೆದು ಹೋಗಿದೆ. ಪ್ರತಿ ಹಳಿಗೆ ಹೋಗಿ ರೈತರನ್ನು ಜಾಗೃತಗೊಳಿಸುವ ಕೆಲಸ ಮಾಡಬೇಕು, ಇಂದು ರೈತ ಸಂಘಗಳು ರಾಜಕೀಯ ಪಕ್ಷದ ಏಜೆಂಟ್ ರೀತಿ ಕೆಲಸ ಮಾಡಿ ಅನೇಕ ರೈತ ಸಂಘಗಳು ಹುಟ್ಟಿಕೊಂಡಿವೆ. ನಿಜವಾಗಿ ರೈತ ಬಗ್ಗೆ ಕಾಳಜಿ ಮನೋಭಾವನೆ ಇದ್ದರೆ ಸಂಘದ ಜೊತೆ ಕೈ ಜೋಡಿಸಿ ಕೆಲಸ ಮಾಡಬೇಕು. ರೈತರ ಸಾಲ ಮನ್ನಾ ಮಾಡುತ್ತೆವೆಂದು ಎಲ್ಲ ರಾಜಕೀಯ ಪಕ್ಷಗಳು ಹೇಳಿ ರೈತರನ್ನು ಸಾಲಗಾರರನ್ನಾಗಿ ಮಾಡಿವೆ. ನಿಜವಾಗಿ ಸ್ವಾಮಿನಾಥನ್ ವರದಿ ಅನುಸಾರ ರೈತರಿಗೆ ವೈಜ್ಞಾನಿಕ ಬೆಲೆಯನ್ನು ನೀಡಬೇಕು ಎಂದು ತಿಳಿಸಿದರು.