ಆಟವಾಡುತ್ತಾ LED ಬಲ್ಬ್ ನುಂಗಿದ 9 ತಿಂಗಳ ಮಗು

Prasthutha|

ಅಹಮ್ಮದಾಬಾದ್: ಮಧ್ಯಪ್ರದೇಶದ ರಟ್ಲಾಮ್‍ನಲ್ಲಿ 9 ತಿಂಗಳ ಪುಟ್ಟ ಕಂದಮ್ಮವೊಂದು ಆಕಸ್ಮಿಕವಾಗಿ ಆಟಿಕೆಯ ಸಣ್ಣ ಎಲ್‍ಇಡಿ ಬಲ್ಬ್ ನುಂಗಿರುವ ಆಘಾತಕಾರಿ ಘಟನೆ ನಡೆದಿದೆ.

- Advertisement -

ಮಗು ಬಲ್ಬ್ ನುಂಗಿರುವ ವಿಚಾರ ತಿಳಿಯುತ್ತಿದ್ದಂತೆಯೇ ಪೋಷಕರು ಮಗುವನ್ನು ಸಿವಿಲ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರ ಚಿಕಿತ್ಸೆಗೆ ಒಳಪಡಿಸಿದ್ದಾರೆ.

ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ, ಮಗು ಆಟಿಕೆ ಮೊಬೈಲ್ ಫೋನ್‍ನೊಂದಿಗೆ ಆಟವಾಡುತ್ತಿತ್ತು. ಈ ಮೊಬೈಲ್ ಫೋನ್‍ನಲ್ಲಿರುವ ಆಂಟೆನಾದಲ್ಲಿ ಎಲ್‍ಇಡಿ ಬಲ್ಬ್ ಇತ್ತು. ಆ ಬಲ್ಬ್ ಅನ್ನು ಕಂದಮ್ಮ ಬಾಯಿಗೆ ಹಾಕಿಕೊಂಡು ಆಟವಾಡುತ್ತಾ ನುಂಗಿಬಿಟ್ಟಿದೆ. ಬಲ್ಬ್ ನುಂಗಿದ ತಕ್ಷಣವೇ ಮಗುವಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ.

- Advertisement -

ಸಿವಿಲ್ ಆಸ್ಪತ್ರೆಯ ಚಿಕಿತ್ಸಾ ಮೇಲ್ವೀಚಾರಕ ಡಾ. ರಾಕೇಶ್ ಜೋಶಿ ಈ ಸಂಬಂಧ ಪ್ರತಿಕ್ರಿಯಿಸಿ, ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಮಗುವಿನ ಎಕ್ಸ್ ರೇ ತೆಗೆದು ನೋಡಿದಾಗ ಮಗು ಬಲ್ಬ್ ನುಂಗಿರುವುದು ಬೆಳಕಿಗೆ ಬಂದಿದೆ. ಬ್ರಾಂಕೋಸ್ಕೋಪ್ ಬಳಸಿ ವಸ್ತುವನ್ನು ಹೊರತೆಗೆಯಲು ಪ್ರಯತ್ನಿಸಿದರೂ ತೆಗೆಯಲು ಸಾಧ್ಯವಾಗಿಲ್ಲ ಎಂದರು.

ಎರಡನೇ ಪ್ರಯತ್ನದಲ್ಲಿ ಬಲ್ಬ್ ಹೊರತೆಗೆಯುವುದರಲ್ಲಿ ಯಶಸ್ವಿಯಾದೆವು. ಮಕ್ಕಳಿಗೆ ಆಟಿಕೆಗಳನ್ನು ಕೊಡುವಾಗ ತಾಯಂದಿರು ಸ್ವಲ್ಪ ಎಚ್ಚರವಹಿಸಬೇಕು ಎಂದು ಜೋಶಿ ತಿಳಿಸಿದರು.

Join Whatsapp