ಮಾಜಿ ಪಿಎಂ-ಮಾಜಿ ಸಿಎಂ ಕುಡಿ, ಸಿನೆಮಾ ಸ್ಟಾರ್ ನಿಖಿಲ್ ಕತ್ತಲ್ಲಿರೋದು 100 ರೂ. ನಕಲಿ ಹುಲಿ ಉಗುರು!

Prasthutha|

- Advertisement -

ಬೆಂಗಳೂರು: ಮಾಜಿ ಪಿಎಂ ಮೊಮ್ಮಗ,ಮಾಜಿ ಸಿಎಂ ಮಗ, ಯುವ ಜೆಡಿಎಸ್ ರಾಜ್ಯಾಧ್ಯಕ್ಷ, ಸಿನೆಮಾ ಸ್ಟಾರ್, ನೂರಾರು ಕೋಟಿಯ ಒಡೆಯ ನಿಖಿಲ್ ಕುಮಾರಸ್ವಾಮಿ ಕತ್ತಲ್ಲಿರೋದು ಬರೀ 100 ರೂ. ನಕಲಿ ಹುಲಿ ಉಗುರು ಪೆಂಡೆಂಟ್! ನಿಖಿಲ್ ಕುಮಾರಸ್ವಾಮಿಗೆ ಆತನ ಮದುವೆಗೆ ಗೆಳೆಯರೊಬ್ಬರು ಕೊಟ್ಟ ಉಡುಗೊರೆ ಮೌಲ್ಯ ಕೇವಲ ನೂರು ರೂಪಾಯಿಯಂತೆ.

ನಿಖಿಲ್ ಕತ್ತಲ್ಲಿರೋದು ನೂರು ರೂ. ಬೆಲೆಬಾಳುವ ನಕಲಿ ಹುಲಿ ಉಗುರಿನ ಪೆಂಡೆಂಟ್ ಎಂದು ಎಚ್‌ಡಿಕೆ ಆಪ್ತ ಟಿಎ ಸರವಣ ಹೇಳಿದ್ದಾರೆ.

- Advertisement -

ಕರ್ನಾಟಕ ಜುವೆಲ್ಲರಿ ಅಸೋಸಿಯೇಷನ್ ವತಿಯಿಂದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿಖಿಲ್ ಹಾಕಿರೋ ಹುಲಿ ಉಗುರು ಪೆಂಡೆಂಟ್ ಡೂಪ್ಲಿಕೇಟ್ ಎಂದಿದ್ದಾರೆ. ನಿಖಿಲ್ ಕುಮಾರಸ್ವಾಮಿ ಧರಿಸಿದ್ದು ಡೂಪ್ಲಿಕೇಟ್ ಪೆಂಡೆಂಟ್, ಅದರ ಬೆಲೆ ಕೇವಲ 100 ರೂಪಾಯಿ ಎಂದು ಹೇಳಿದ್ದಾರೆ.

ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲೇ ಅದು ಡೂಪ್ಲಿಕೇಟ್ ಅಂತ ವೀಡಿಯೋ ಮಾಡಿ ಪ್ರೂವ್ ಮಾಡಿದ್ವಿ ಅಂತ ಶರವಣ ಹೇಳಿದ್ದಾರೆ.

ಚಿನ್ನದ ಅಂಗಡಿಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಏಕಾಏಕಿ ದಾಳಿ ಮಾಡುತ್ತೆ. ಅಧಿಕಾರಿಗಳು ಚಿನ್ನದ ಅಂಗಡಿಗಳ ಮೇಲೆ ವಿನಾಕಾರಣ ತಪಾಸಣೆ ಹೆಸರಲ್ಲಿ ಕಿರುಕುಳ ಕೊಡ್ತಿದ್ದಾರೆ, ಹುಲಿ ಉಗುರು ನೆಪದಲ್ಲಿ ಅಧಿಕಾರಿಗಳು ದಾಂಧಲೆ ಎಬ್ಬಿಸುತ್ತಿದ್ದಾರೆ ಎಂದು ಶರವಣ ಆರೋಪಿಸಿದ್ದಾರೆ.

ವರ್ತೂರು ಸಂತೋಷ್ ಅನ್ನು ಅಮಾನವೀಯವಾಗಿ ಅಧಿಕಾರಿಗಳು ನಡೆಸಿಕೊಂಡರು ಎಂದ ಶರವಣ, ಯಾವುದೇ ನೋಟೀಸ್ ಕೊಡದೆ ಸಂತೋಷ್ ರನ್ನು ಬಂಧಿಸಿ ಜೈಲಿಗೆ ಹಾಕಿದ್ರು ಎಂದೂ ಇದೇ ಸಂದರ್ಭದಲ್ಲಿ ಆರೋಪಿಸಿದರು.



Join Whatsapp