ಪ್ರೆಶರ್ ಕುಕ್ಕರ್ ಬಳಸಿ ಮನೆಯಲ್ಲಿ ಡ್ರಗ್ಸ್ ತಯಾರಿಸುತ್ತಿದ್ದ ನೈಜೀರಿಯನ್ ವ್ಯಕ್ತಿಯ ಬಂಧನ
Prasthutha: January 13, 2022

ಕರ್ನಾಟಕ : ಹೆಸರಘಟ್ಟ ಸಮೀಪದ ತರಬನಹಳ್ಳಿ ಗ್ರಾಮದಲ್ಲಿ ನೈಜೀರಿಯಾದ ವ್ಯಕ್ತಿಯೊಬ್ಬನನ್ನು ಮನೆಯಲ್ಲಿ ಡ್ರಗ್ಸ್ ತಯಾರಿಸುತ್ತಿದ್ದನೆಂದು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಅವರು ಎಂಡಿಎಂಎ ಹರಳುಗಳನ್ನು ತಯಾರಿಸುತ್ತಿದ್ದರು ಎನ್ನಲಾಗಿದೆ. ನೈಜೀರಿಯಾದ ಪ್ರಜೆ ರಿಚರ್ಡ್ ಸಿರಿಲ್ 2019 ರಲ್ಲಿ ತನ್ನ ಹಿರಿಯ ಸಹೋದರನೊಂದಿಗೆ ವ್ಯಾಪಾರ ವೀಸಾದಲ್ಲಿ ಭಾರತಕ್ಕೆ ಬಂದು ಕರ್ನಾಟಕಕ್ಕೆನೆಲೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ವಿಚಾರಣೆಯನ್ನು ನಡೆಸಲಾಗುತ್ತಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
