ಮದುವೆಯಿಂದ ಹಿಂದಿರುಗುತ್ತಿದ್ದಾಗ ದೋಣಿ ಅವಘಡ: 103 ಮಂದಿ ಸಾವು

Prasthutha|

ನೈಜೀರಿಯಾ: ಮದುವೆಯಿಂದ ಹಿಂದಿರುಗುತ್ತಿದ್ದಾಗ ದೋಣಿ ಮಗುಚಿ, ಮಕ್ಕಳು ಸೇರಿದಂತೆ ಕನಿಷ್ಠ 103 ಜನರು ಸಾವನ್ನಪ್ಪಿದ ಘಟನೆ ಎಂದು ಉತ್ತರ ನೈಜೀರಿಯಾದಲ್ಲಿ ನಡೆದಿದೆ.

- Advertisement -


ಘಟನೆಯಲ್ಲಿ ಹಲವು ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ತೀವ್ರ ಶೋಧ ಕಾರ್ಯ ನಡೆದಿದೆ. ಇದುವರೆಗೆ 100 ಜನರನ್ನು ರಕ್ಷಿಸಲಾಗಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.
ನೀರಿನಲ್ಲಿ ಮುಳುಗಿದವರಲ್ಲಿ ಹೆಚ್ಚಿನವರು ಸಂಬಂಧಿಕರಾಗಿದ್ದು, ಅವರು ಮದುವೆಗೆ ಬಂದಿದ್ದರು. ತಡರಾತ್ರಿಯವರೆಗೂ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು ಎಂದು ಸ್ಥಳೀಯ ಮುಖ್ಯಸ್ಥ ಅಬ್ದುಲ್ ಗಣ ಲುಕ್ಪಾಡಾ ಹೇಳಿದ್ದಾರೆ.


ಬೈಕ್ ನಲ್ಲಿ ಸಮಾರಂಭಕ್ಕೆ ಆಗಮಿಸಿದ ಅವರು, ಮಳೆಯಿಂದಾಗಿ ರಸ್ತೆಯಲ್ಲಿ ನೀರು ತುಂಬಿದ ಪರಿಣಾಮ ಬೋಟ್ ನಲ್ಲಿ ತೆರಳಬೇಕಾಯಿತು. ದೋಣಿಯಲ್ಲಿ ಸುಮಾರು 300 ಜನ ಇದ್ದರು, ಹೀಗಾಗಿ ಬೋಟ್ ಓವರ್ ಲೋಡ್ ಆಗಿತ್ತು. ದೋಣಿ ಚಲಿಸುತ್ತಿದ್ದಾಗ ಒಂದು ದೊಡ್ಡ ಮರದ ದಿಮ್ಮಿಗೆ ಬಡಿದು ಎರಡು ಭಾಗವಾಗಿ ದುರ್ಘಟನೆ ಸಂಭವಿಸಿದೆ. ಮಂಗಳವಾರ ಸಂಜೆ ಹೊತ್ತಿಗೆ ಎಲ್ಲರ ಮೃತದೇಹಗಳನ್ನು ನೀರಿನಿಂದ ಹೊರ ತೆಗೆದು ಅಂತ್ಯಸಂಸ್ಕಾರ ನೆರವೇರಿಸಲಾಗಿದೆ ಎಂದು ಅವರು ವಿವರಿಸಿದರು.
ಇದು ಹಲವು ವರ್ಷಗಳಿಂದ ಕಂಡ ಅತ್ಯಂತ ಭೀಕರ ದೋಣಿ ದುರಂತ ಎಂದು ಸ್ಥಳೀಯರು ಹೇಳಿದ್ದಾರೆ.



Join Whatsapp