ಜಮ್ಮು ಕಾಶ್ಮೀರದ ಜಮಾತ್-ಎ-ಇಸ್ಲಾಮಿ ಸದಸ್ಯರ ಮನೆ ಮೇಲೆ NIA ಅಧಿಕಾರಿಗಳ ದಾಳಿ

Prasthutha|

ಶ್ರೀನಗರ : ಭಯೋತ್ಫಾದಕ ಸಂಘಟನೆಗಳಿಗೆ ಹಣಕಾಸುಗಳ ನೆರವು ನೀಡುತ್ತಿದೆ ಎಂಬ ಆರೋಪದಡಿಯಲ್ಲಿ ಜಮ್ಮು ಕಾಶ್ಮೀರದ 15 ಜಿಲ್ಲೆಗಳಲ್ಲಿ NIA ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ. ಜಮಾತ್-ಎ-ಇಸ್ಲಾಮಿ ಸದಸ್ಯರ ಮನೆ ಮೇಲೆ ದಾಳಿ ನಡೆಸಿರುವ ರಾಷ್ಟ್ರೀಯ ತನಿಖಾ ದಳದ ( NIA ) ಅಧಿಕಾರಿಗಳು ರಾಜೌರಿ, ಅನಂತ್ ನಾಗ್, ರಂಬನ್, ಕಿಶ್ತ್ವಾರ್, ಬುಡ್ಲಾಮ್, ಶೋಪಿಯಾನ್ ಮುಂತಾದ ಸ್ಥಳಗಳಲ್ಲಿರುವ ನಿವಾಸಗಳ ಮೇಲೆ ಶೋಧ ನಡೆಸಿದ್ದಾರೆ.

- Advertisement -

ಜಮ್ಮು ಕಾಶ್ಮೀರದಾದ್ಯಂತ ಎನ್ ಐಎ ಅಧಿಕಾರಿಗಳು ಜುಲೈ 10 ರಂದು ಭಯೋತ್ಪಾದಕ ನಿಧಿಯ ಪ್ರಕರಣಕ್ಕೆ ಸಂಬಂಧಿಸಿ ದಾಳಿ ನಡೆಸಿ ಆರು ಮಂದಿಯನ್ನು ಬಂಧಿಸಿದ್ದರು. ಇದೇ ವೇಳೆ ಜಮ್ಮು ಕಾಶ್ಮೀರ ಸರಕಾರವು ಹನ್ನೊಂದು ಮಂದಿ ಉದ್ಯೋಗಿಗಳನ್ನು ಭಯೋತ್ಪಾದಕ ಸಂಪರ್ಕ ಹೊಂದಿದ ಆರೋಪದಡಿಯಲ್ಲಿ ವಜಾಗೊಳಿಸಿತ್ತು.



Join Whatsapp