ಕೇರಳ: 56 ಕಡೆ ಪಿಎಫ್’ಐ ಮುಖಂಡರ ಮನೆಗಳ ಮೇಲೆ ಎನ್’ಐಎ ದಾಳಿ

Prasthutha|

ತಿರುವನಂತಪುರ: ಕೇಂದ್ರ ಸರ್ಕಾರದಿಂದ ಇತ್ತೀಚೆಗೆ ನಿಷೇಧಕ್ಕೊಳಗಾಗಿರುವ ಪಾಪ್ಯುಲರ್  ಫ್ರಂಟ್ ಆಫ್ ಇಂಡಿಯಾದ  ಮಾಜಿ ಮುಖಂಡರನ್ನು ಗುರಿಯಾಗಿಸಿ ಸುಮಾರು 56 ಕಡೆಗಳಲ್ಲಿ ಎನ್’ಐಎ ಗುರುವಾರ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.

- Advertisement -

ಪಾಲಕ್ಕಾಡ್, ಕೊಲ್ಲಂ, ಕೋಝಿಕ್ಕೋಡು, ಆಲಪ್ಪುಝ, ಪಟ್ಟನಂತಿಟ್ಟ, ಎರ್ನಾಕುಲಂ, ಮಲಪ್ಪುರಂ, ತಿರುವನಂತಪುರಂ ಮುಂತಾದ ಕಡೆಗಳಲ್ಲಿ ಎನ್’ಐಎ ದಾಳಿ ನಡೆಸಿದೆ. ಬೆಳಗ್ಗೆ 4 ಗಂಟೆ ಸುಮಾರಿಗೆ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಎನ್’ಐಎ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.

ಆಲಪ್ಪುಝದಲ್ಲಿ ನಾಲ್ಕು ಕಡೆ, ಪಾಲಕ್ಕಾಡ್’ನಲ್ಲಿ ಒಂದು ಕಡೆ, ಕೊಲ್ಲಂನಲ್ಲಿ ಎರಡು ಕಡೆ ಸೇರಿದಂತೆ ಒಟ್ಟು 56 ಕಡೆಗಳಲ್ಲಿ ಈ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.

- Advertisement -

ಸೆಪ್ಟಂಬರ್ ತಿಂಗಳಲ್ಲಿ ದೇಶಾದ್ಯಂತ ಪಾಪ್ಯುಲರ್ ಫ್ರಂಟ್ ನಾಯಕರ ಮನೆ, ಕಚೇರಿಗಳ ಮೇಲೆ ದಾಳಿ ನಡೆದಿತ್ತು. ಬಳಿಕ ಸಂಘಟನೆಯನ್ನು ಕೇಂದ್ರ ಸರ್ಕಾರ 5 ವರ್ಷಗಳ ಕಾಲ ನಿಷೇಧಿಸಿತ್ತು.

Join Whatsapp