ತಿರುವನಂತಪುರ: ಕೇಂದ್ರ ಸರ್ಕಾರದಿಂದ ಇತ್ತೀಚೆಗೆ ನಿಷೇಧಕ್ಕೊಳಗಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮಾಜಿ ಮುಖಂಡರನ್ನು ಗುರಿಯಾಗಿಸಿ ಸುಮಾರು 56 ಕಡೆಗಳಲ್ಲಿ ಎನ್’ಐಎ ಗುರುವಾರ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.
ಪಾಲಕ್ಕಾಡ್, ಕೊಲ್ಲಂ, ಕೋಝಿಕ್ಕೋಡು, ಆಲಪ್ಪುಝ, ಪಟ್ಟನಂತಿಟ್ಟ, ಎರ್ನಾಕುಲಂ, ಮಲಪ್ಪುರಂ, ತಿರುವನಂತಪುರಂ ಮುಂತಾದ ಕಡೆಗಳಲ್ಲಿ ಎನ್’ಐಎ ದಾಳಿ ನಡೆಸಿದೆ. ಬೆಳಗ್ಗೆ 4 ಗಂಟೆ ಸುಮಾರಿಗೆ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಎನ್’ಐಎ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.
ಆಲಪ್ಪುಝದಲ್ಲಿ ನಾಲ್ಕು ಕಡೆ, ಪಾಲಕ್ಕಾಡ್’ನಲ್ಲಿ ಒಂದು ಕಡೆ, ಕೊಲ್ಲಂನಲ್ಲಿ ಎರಡು ಕಡೆ ಸೇರಿದಂತೆ ಒಟ್ಟು 56 ಕಡೆಗಳಲ್ಲಿ ಈ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.
ಸೆಪ್ಟಂಬರ್ ತಿಂಗಳಲ್ಲಿ ದೇಶಾದ್ಯಂತ ಪಾಪ್ಯುಲರ್ ಫ್ರಂಟ್ ನಾಯಕರ ಮನೆ, ಕಚೇರಿಗಳ ಮೇಲೆ ದಾಳಿ ನಡೆದಿತ್ತು. ಬಳಿಕ ಸಂಘಟನೆಯನ್ನು ಕೇಂದ್ರ ಸರ್ಕಾರ 5 ವರ್ಷಗಳ ಕಾಲ ನಿಷೇಧಿಸಿತ್ತು.