ಅಖಿಲ್‌ ಗೊಗೊಯಿ ವಿರುದ್ಧ ಸಿಎಎ ಹೋರಾಟ ವೇಳೆ ದಾಖಲಾಗಿದ್ದ ಯುಎಪಿಎ ಕೇಸ್‌ ಕೈಬಿಟ್ಟ ಎನ್‌ ಐಎ ಕೋರ್ಟ್‌

Prasthutha|

ಗುವಾಹತಿ : ಅಸ್ಸಾಂನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟದ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಶಿವಸಾಗರ ನೂತನ ಶಾಸಕ, ಹೋರಾಟಗಾರ ಅಖಿಲ್‌ ಗೊಗೊಯಿ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ದಾಖಲಾಗಿದ್ದ ಆರೋಪಗಳನ್ನು ಎನ್‌ ಐಎ ಕೋರ್ಟ್‌ ಕೈಬಿಟ್ಟಿದೆ.

- Advertisement -

ಎನ್‌ ಐಎ ಕೋರ್ಟ್‌ ವಿಶೇಷ ನ್ಯಾಯಾಧೀಶ ಪ್ರಾಂಜಲ್‌ ದಾಸ್‌ ೨೦೧೯ರ ಡಿಸೆಂಬರ್‌ ನಲ್ಲಿ ಬಂಧಿತರಾಗಿರುವ ಗೊಗೊಯಿ ವಿರುದ್ಧ ದೋಷಾರೋಪಗಳನ್ನು ದಾಖಲಿಸಿಕೊಳ್ಳಲಿಲ್ಲ. ಗೊಗೊಯಿ ವಿರುದ್ಧ ಈ ಹೋರಾಟಕ್ಕೆ ಸಂಬಂಧಿಸಿ ಎರಡು ಪ್ರಕರಣಗಳು ದಾಖಲಾಗಿತ್ತು. ಚಬುವಾ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಗಳನ್ನು ಈಗ ಕೋರ್ಟ್‌ ಕೈಬಿಟ್ಟಿದೆ.

ಗೊಗೊಯಿ ಜೊತೆ ಸಹ ಆರೋಪಿಗಳಾದ ಜಗಜೀತ್‌ ಗೊಹೇನ್‌ ಮತ್ತು ಭೂಪೇನ್‌ ಗೊಗೊಯಿ ವಿರುದ್ಧವೂ ಯುಎಪಿಎ ಪ್ರಕರಣದಲ್ಲಿ ದಾಖಲಾಗಿದ್ದ ಎಲ್ಲಾಆರೋಪಗಳನ್ನು ಕೋರ್ಟ್‌ ಕೈಬಿಟ್ಟಿದೆ.

- Advertisement -

ಪ್ರಕರಣದಲ್ಲಿ ಇದಕ್ಕೂ ಮೊದಲು ಗೊಗೊಯಿಗೆ ಕೋರ್ಟ್‌ ಜಾಮೀನು ನೀಡಿತ್ತು. ಚಾಂದ್ಮಾರಿ ಮತ್ತು ಚಬುವಾ ಪೊಲೀಸ್‌ ಠಾಣೆಗಳಲ್ಲಿ ಗೊಗೊಯಿ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಎನ್‌ ಐಎ ವಿಚಾರಣೆ ನಡೆಸುತ್ತಿತ್ತು. ಅದರಲ್ಲಿ ಒಂದು ಪ್ರಕರಣವನ್ನು ಈಗ ಕೈಬಿಡಲಾಗಿದೆ.   



Join Whatsapp