ಬೆಂಗಳೂರು ಶೂಟೌಟ್ ಪ್ರಕರಣ । 4 ವರ್ಷದ ನಂತರ UAPA ಆರೋಪಿಯನ್ನು ಖುಲಾಸೆಗೊಳಿಸಿದ NIA ನ್ಯಾಯಾಲಯ

Prasthutha|

ಬೆಂಗಳೂರು : 2005 ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‌ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ನ್ಯಾಯಲಯ ಪ್ರಕರಣದ ಆರೋಪಿ ಮೊಹಮ್ಮದ್ ಹಬೀಬ್ ಅವರನ್ನು ಇಂದು ದೋಷಮುಕ್ತಗೊಳಿಸಿದೆ. ಮೊಹಮ್ಮದ್ ಹಬೀಬ್ ಅವರು UAPA ಕಾಯ್ದೆಯಡಿ ಕಳೆದ 4 ವರ್ಷಗಳಿಂದ ಜೈಲಿನಲ್ಲಿ ಬಂಧಿಯಾಗಿದ್ದರು.

- Advertisement -

2005 ರ ಡಿಸೆಂಬರ್‌ನಲ್ಲಿ ಬೆಂಗಳೂರಿನ IISC ಕ್ಯಾಂಪಸ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಒಬ್ಬರು ವ್ಯಕ್ತಿ ಮೃತಪಟ್ಟು ಅನೇಕರು ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ 7 ನೇ ಆರೋಪಿಯಾಗಿ ಹಬೀಬ್ ಅವರನ್ನು 2017 ರಲ್ಲಿ ಬಂಧಿಸಲಾಗಿತ್ತು.

NIA ವಿಶೇಷ ನ್ಯಾಯಾಧೀಶ ಕಾಸನಪ್ಪ ನಾಯ್ಕ್‌ ಮೊಹಮ್ಮದ್ ಹಬೀಬ್ ಅವರನ್ನು ಬಿಡುಗಡೆಗೊಳಿಸಿ ಆದೇಶ ನೀಡಿದ್ದಾರೆ. NIA ಆರೋಪಿತರ ವಿರುದ್ಧದ ಆರೊಪಗಳನ್ನು ಸಾಬೀತುಪಡಿಸಲು ವಿಫಲವಾಗಿದೆ. NIA ಬಂಧಿತ ಆರೋಪಿ ಮೊಹಮ್ಮದ್ ಹಬೀಬ್ ಅವರ ವಿರುದ್ಧ ಯಾವುದೇ ಪ್ರಬಲ ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ಪ್ರಕರಣದ 7 ನೇ ಆರೋಪಿಯಾಗಿರುವ ಹಬೀಬ್ ವಿರುದ್ಧ IPC ಸೆಕ್ಷನ್ 121-A, 122, 123, 307, 302 ಇಂಡಿಯನ್ ಆರ್ಮ್ಸ್‌ ಆಕ್ಟ್‌ನ ಸೆಕ್ಷನ್‌ 25, 27 ಸೇರಿದಂತೆ ಬೇರೆ ಬೇರೆ ಕಾನೂನುಗಳಡಿ NIA ಪ್ರಕರಣವನ್ನು ದಾಖಲಿಸಿತ್ತು.
ಆರೋಪಿಯು ತಾನು ಯಾವ ಕಾರಣಕ್ಕೆ ಬಂಧಿತನಾಗಿದ್ದೇನೆ ಎಂದು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂದು ನ್ಯಾಯಾಧೀಶರಾದ ಕಾಸನಪ್ಪ ನಾಯ್ಕ್ ಪ್ರಕರಣದ ವಿಚಾರಣೆ ವೇಳೆ ತಿಳಿಸಿದ್ದಾರೆ
ಹಬೀಬ್ ಅವರ ಪರವಾಗಿ ವಾದಿಸಿದ ನ್ಯಾಯವಾದಿ ಮೊಹಮ್ಮದ್ ತಾಹೀರ್ ಪೊಲೀಸರು ಆರೋಪಿಯ ವಿರುದ್ಧ ಚಾರ್ಜ್‌ಶೀಟ್‌ನಲ್ಲಿ ಯಾವುದೇ ಆರೋಪಗಳನ್ನು ಮಾಡಿಲ್ಲ. ಜೊತೆಗೆ ಪ್ರಕರಣದಲ್ಲಿ ಮೊಹಮ್ಮದ್ ಹಬೀಬ್ ಅವರ ಪಾತ್ರವನ್ನು ಸಾಬೀತುಪಡಿಸುವ ಯಾವೊಂದು ಸಾಕ್ಷಿಗಳನ್ನು ಇದುವರೆಗೆ ನ್ಯಾಯಾಲಯಕ್ಕೆ ಸಲ್ಲಿಸಿಲ್ಲ ಎಂದು ಹೇಳಿದ್ದಾರೆ.



Join Whatsapp