ಐಸಿಸ್ ನಂಟು ಆರೋಪ: ಎನ್.ಐ.ಎ ಯಿಂದ ಇಬ್ಬರು ಮಹಿಳೆಯರ ಬಂಧನ

Prasthutha|

ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆ ಕಣ್ಣೂರಿನಲ್ಲಿ ಮಂಗಳವಾರ ಐಸಿಸ್ ನೊಂದಿಗೆ ನಂಟು ಹೊಂದಿದ ಆರೋಪದಲ್ಲಿ ಇಬ್ಬರು ಮಹಿಳೆಯರನ್ನು ಬಂಧಿಸಿದೆ.

- Advertisement -

ಸಾಮಾಜಿಕ ಜಾಲತಾಣಗಳಾದ ಟೆಲಿಗ್ರಾಮ್, ಹೂಪ್ ಮತ್ತು ಇನ್ ಸ್ಟಾಗ್ರಾಮ್ ಸೇರಿದಂತೆ ವಿವಿಧ ಮಾಧ್ಯಮವನ್ನು ಬಳಸಿಕೊಂಡು ಐಸಿಸ್ ನ ಪ್ರಚಾರ ಮತ್ತು ನೇಮಕಾತಿ ನಡೆಸಿದ ಆರೋಪದಲ್ಲಿ ಇವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.

ನವದೆಹಲಿಯಿಂದ ಆಗಮಿಸಿದ ತನಿಖಾ ತಂಡವು ಶಿಫಾ ಹಾರಿಸ್ ಮತ್ತು ಮಿಶಾ ಸಿದ್ದೀಕ್ ಎಂಬವರ ನಿವಾಸಕ್ಕೆ ಇಂದು ಬೆಳಗ್ಗೆ ಆಗಮಿಸಿ ಶೋಧ ನಡೆಸಿದ ಬಳಿಕ ವಶಕ್ಕೆ ಪಡೆದಿದೆ ಎಂದು ಹೇಳಲಾಗಿದೆ.

- Advertisement -

ಇದಕ್ಕೂ ಮೊದಲು ಮಾರ್ಚ್ ಆರಂಭದಲ್ಲಿ ಎನ್.ಐ.ಎ ಬಂಧಿತರ ಸಹಚರರಾದ ಕಣ್ಣೂರಿನ ಮುಸಾದ್ ಅನ್ವರ್ ನನ್ನು ಬಂಧಿಸಿತ್ತು. ಮಾತ್ರವಲ್ಲದೆ ಇತರ ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿತ್ತು.

Join Whatsapp