ಚೀನಾ ಪರ ಪ್ರಚಾರ ಆರೋಪ: ನ್ಯೂಸ್​ ಕ್ಲಿಕ್ ಸಂಸ್ಥಾಪಕ ಪುರಕಾಯಸ್ಥ ಬಂಧನ

Prasthutha|

- Advertisement -

ನವದೆಹಲಿ: ಚೀನಾ ಪರ ಪ್ರಚಾರಕ್ಕೆ ಹಣ ಪಡೆದ ಆರೋಪದ ಬೆನ್ನಲ್ಲೇ ಸುದ್ದಿ ವೆಬ್​ಸೈಟ್ ‘ನ್ಯೂಸ್​ಕ್ಲಿಕ್’​ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥರನ್ನು ದೆಹಲಿ ಪೊಲೀಸರು ಬಂಧನ ಮಾಡಿದ್ದಾರೆ. ಭಯೋತ್ಪಾದನಾ ವಿರೋಧಿ ಕಾನೂನೂ, ಕಾನೂನು ಬಾಹಿರ ಚಟುವಟಿಕೆ (ತಡೆಗಟ್ಟುವಿಕೆ) ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ.

ನ್ಯೂಸ್​ ಪೋರ್ಟಲ್​ನ ಎಚ್​ಆರ್​ ಹೆಡ್​​ ಅಮಿತ್​ ಚಕ್ರವರ್ತಿ ಎಂಬುವರನ್ನು ಸಹ ಬಂಧನ ಮಾಡಲಾಗಿದೆ.

Join Whatsapp