ಸುದ್ದಿ ವಾಹಿನಿಗಳು ಉದ್ದೇಶಪೂರ್ವಕವಾಗಿ ದುರ್ಬಲ ಸಮುದಾಯಗಳನ್ನು ಗುರಿಯಾಗಿಸುವ ಸನ್ನಿವೇಶಗಳನ್ನು ಸೃಷ್ಟಿಸಿವೆ: ಎಡಿಟರ್ಸ್ ಗಿಲ್ಡ್

Prasthutha|

ಹೊಸದಿಲ್ಲಿ: ಕೆಲವು ಸುದ್ದಿ ವಾಹಿನಿಗಳು ಉದ್ದೇಶಪೂರ್ವಕವಾಗಿ ದುರ್ಬಲ ಸಮುದಾಯಗಳನ್ನು ಗುರಿಯಾಗಿಸುವ ಸನ್ನಿವೇಶಗಳನ್ನು ಸೃಷ್ಟಿಸಿವೆ ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಹೇಳಿದೆ. ಪ್ರವಾದಿ ಪೈಗಂಬರ್ ವಿರುದ್ಧ ಬಿಜೆಪಿ ನಾಯಕರು ನೀಡಿದ ಅವಹೇಳನಕಾರಿ ಹೇಳಿಕೆಗಳಿಗೆ ಸಂಬಂಧಿಸಿ ಟ್ವಿಟರ್’ನಲ್ಲಿ ಪ್ರತಿಕ್ರಿಯಿಸಿರುವ ಎಡಿಟರ್ಸ್‌ ಗಿಲ್ಡ್‌ ಸಂಸ್ಥೆ, ಸುದ್ದಿವಾಹಿನಿಗಳು ತಮ್ಮ ಬೇಜವಾಬ್ದಾರಿ ಹೇಳಿಕೆಗಳ ಮೂಲಕ ದೇಶಕ್ಕೆ ಮುಜುಗರವೆಸಗಿದೆ ಎಂದು ಹೇಳಿದೆ.

- Advertisement -

“ಕೋಮು ಪರಿಸ್ಥಿತಿಯನ್ನು ನಿಭಾಯಿಸಲು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಹೊರಡಿಸಿದ ಪತ್ರಿಕೋದ್ಯಮ ನೀತಿಗಳು ಮತ್ತು ಮಾರ್ಗಸೂಚಿಗಳು ಹಾಗೂ ಜಾತ್ಯತೀತತೆಗೆ ರಾಷ್ಟ್ರದ ಸಾಂವಿಧಾನಿಕ ಬದ್ಧತೆಯ ಕುರಿತು ಕೆಲವು ಟಿವಿ ಚಾನೆಲ್‌ಗಳು ಗಮನಹರಿಸಿದ್ದರೆ, ದೇಶಕ್ಕೆ ಅನಗತ್ಯ ಮುಜುಗರ ಉಂಟು ಮಾಡಿದ ಘಟನೆಯನ್ನು ತಪ್ಪಿಸಬಹುದಿತ್ತು” ಎಂದು ಎಡಿಟರ್ಸ್‌ ಗಿಲ್ಡ್‌ ಹೇಳಿದೆ.

ದುರ್ಬಲ ಸಮುದಾಯಗಳನ್ನು ಗುರಿಯಾಗಿಸುವ ಸನ್ನಿವೇಶಗಳನ್ನು ಕೆಲವು ಸುದ್ದಿ ವಾಹಿನಿಗಳು ಉದ್ದೇಶಪೂರ್ವಕವಾಗಿ ಸೃಷ್ಟಿಸಿವೆ. “ಈ ಚಾನೆಲ್‌ಗಳು ವಿರಾಮ ತೆಗೆದುಕೊಂಡು, ವಿಭಜಕ ಮತ್ತು ವಿಷಕಾರಿ ಧ್ವನಿಗಳಿಗೆ ನ್ಯಾಯಸಮ್ಮತತೆಯನ್ನು ನೀಡುವ ಮೂಲಕ ಅವರು ಏನು ಮಾಡಿದ್ದಾರೆ ಎಂಬುದರ ಬಗ್ಗೆ ವಿಮರ್ಶಾತ್ಮಕ ನೋಟವನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸುತ್ತದೆ” ಎಂದು ಹೇಳಿ



Join Whatsapp