ರಾಯ್ ಪುರ್: ನವದಂಪತಿ ಶವವಾಗಿ ಪತ್ತೆಯಾದ ಘಟನೆ ರಾಯ್ ಪುರ್ ನ ಬ್ರಿಜ್ ನಗರದಲ್ಲಿ ನಡೆದಿದೆ.
ಅಸ್ಲಂ (24) ಹಾಗೂ ಕಹ್ಕಶಾ ಬಾನೊ (22) ಮೃತ ದಂಪತಿ ಎಂದು ಗುರುತಿಸಲಾಗಿದೆ.
ಕಹ್ಕಶಾ ಬಾನೊ ದೇಹದ ಮೇಲೆ ಬಲವಾದ ಇರಿತದ ಗಾಯಗಳಾಗಿದ್ದು, ಇಬ್ಬರ ನಡುವೆ ಜಗಳವಾಗಿ ಪತಿ ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ ಎನ್ನಲಾಗಿದೆ. ನಂತರ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಅಸ್ಲಂ ಹಾಗೂ ಕಹ್ಕಶಾ ಬಾನೊ ಭಾನುವಾರವಷ್ಟೇ ವಿವಾಹವಾಗಿದ್ದರು. ಮಂಗಳವಾರ ರಿಸೆಪ್ಷನ್ ಕಾರ್ಯಕ್ರಮಕ್ಕೆ ತಯಾರಾಗುತ್ತಿದ್ದಾಗ ವಧುವಿನ ಕಿರುಚಾಟದ ಧ್ವನಿ ಕೇಳಿ ವರನ ತಾಯಿ ಅಲ್ಲಿಗೆ ಹೋಗಿದ್ದಾರೆ. ಕೊಠಡಿ ಒಳಗಿನಿಂದ ಲಾಕ್ ಆಗಿತ್ತು. ಕುಟುಂಬದ ಸದಸ್ಯರು ಕರೆದರೂ ಪ್ರತಿಕ್ರಿಯೆ ಬರದಿದ್ದಾಗ, ಕಿಟಕಿಯಿಂದ ನೋಡಿದ್ದಾರೆ. ಆಗ ಇಬ್ಬರೂ ಪ್ರಜ್ಞಾಹೀನವಾಗಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಪೊಲೀಸರಿಗೆ ತಿಳಿಸಿದ್ದಾರೆ.
ಪೊಲೀಸರು ಮೃತ ದೇಹಗಳನ್ನು ಶವ ಪರೀಕ್ಷೆಗೆ ಕಳುಹಿಸಿ, ಚಾಕುವನ್ನು ವಶಕ್ಕೆ ಪಡೆದಿದ್ದಾರೆ.