ಪ್ರೀತಿಸಿ ಮದುವೆಯಾಗಿದ್ದ ನವ ದಂಪತಿ ಆತ್ಮಹತ್ಯೆ

Prasthutha|

ವಿಜಯಪುರ: ಮೂರು ತಿಂಗಳಿಂದಷ್ಟೇ ಮದುವೆಯಾಗಿದ್ದ ನವ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಬಿಜ್ಜವಾರ ಗ್ರಾಮದಲ್ಲಿ ನಡೆದಿದೆ.

- Advertisement -


ವಿಜಯಪುರ ಪಟ್ಟಣದ ನಿವಾಸಿ ರಮೇಶ್ ( 28 ) ಸಹನಾ ( 26 ) ಆತ್ಮಹತ್ಯೆಗೆ ಶರಣಾದ ನವ ದಂಪತಿ.


ಮನೆಯವರ ವಿರೋಧದ ನಡುವೆಯೇ ಪ್ರೀತಿಸಿ ಮದುವೆಯಾಗಿ ಬಾಡಿಗೆ ಮನೆಲ್ಲಿ ಸಂಸಾರ ನಡೆಸುತ್ತಿದ್ದರು. ಎರಡು ದಿನದಿಂದೆ ಬಿಜ್ಜವಾರ ಗ್ರಾಮದ ಸಂಬಂಧಿಕರ ಮನೆಗೆ ಬಂದಿದ್ದ ದಂಪತಿ, ರಾತ್ರಿ ಮನೆಯಿಂದ ಹೊರಟವರು ಕೃಷಿ ಹೊಂಡದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ವಿಷಯ ತಿಳಿದು ಸ್ಥಳಕ್ಕೆ ವಿಜಯಪುರ ಪೊಲೀಸ್ ಠಾಣಾ ಪೊಲೀಸರು ಭೇಟಿ ನೀಡಿ ಸ್ಥಳೀಯರ ಸಹಾಯದಿಂದ ನೀರಿನಲ್ಲಿದ್ದ ಮೃತದೇಹಗಳನ್ನು ಹೊರತೆಗೆದು ತನಿಖೆ ನಡೆಸಿದ್ದಾರೆ.

Join Whatsapp