ಗಾಝಿಪುರ : ಉತ್ತರ ಪ್ರದೇಶದ ಗಾಝಿಪುರ ಜಿಲ್ಲೆಯ ಗಂಗಾ ನದಿ ದಡದಲ್ಲಿ 22 ದಿನಗಳ ಹೆಣ್ಣು ಮಗುವೊಂದು ಮರದ ಪೆಟ್ಟಿಗೆಯೊಂದರಲ್ಲಿ ತೇಲಿ ಬಂದ ಘಟನೆ ನಡೆದಿದೆ.
ಮಗುವಿನ ಸಂಪೂರ್ಣ ಜವಾಬ್ದಾರಿ ಸರಕಾರ ವಹಿಸಿಕೊಳ್ಳುವುದಾಗಿ ಮುಖ್ಯಮಂತ್ರಿ ಆದಿತ್ಯನಾಥ್ ಪ್ರಕಟಿಸಿದ್ದಾರೆ.
ದಾದ್ರಿ ಘಾಟ್ ಬಳಿ ಪೆಟ್ಟಿಗೆಯಲ್ಲಿ ಮಗು ಅಳುತ್ತಿರುವ ಸದ್ದು ಕೇಳಿದ ದೋಣಿ ಚಾಲಕನೊಬ್ಬ, ಪೆಟ್ಟಿಗೆಯನ್ನು ತೆಗೆದು ನೋಡಿದಾಗ ಮಗು ಪತ್ತೆಯಾಗಿದೆ. ಪೆಟ್ಟಿಗೆಯೊಳಗೆ ಮಗುವಿನ ಜಾತಕ ಮತ್ತು
ದೇವರ ಫೋಟೊ ಇಡಲಾಗಿತ್ತು. ಮಗುವನ್ನು ದುಪಟ್ಟಾದಲ್ಲಿ ಸುತ್ತಲಾಗಿತ್ತು. ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಮಗುವನ್ನು ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬಳಿಕ ಆಶಾ ಜ್ಯೋತಿ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಮಗುವಿಗೆ ಗಂಗಾ ಎಂದು ನಾಮಕರಣ ಮಾಡಲಾಗಿದೆ.