ವಾಷಿಂಗ್ಟನ್: ಭದ್ರತಾ ದೃಷ್ಟಿಯಿಂದ ನ್ಯೂಯಾರ್ಕ್ ಸಿಟಿಯ ಸರ್ಕಾರಿ ಸಾಧನಗಳಲ್ಲಿ ಚೀನಾ ಮೂಲದ ವೀಡಿಯೋ ಹಂಚಿಕೆ ಪ್ಲಾಟ್ಪಾರ್ಮ್ ಟಿಕ್ ಟಾಕ್ ಅನ್ನು ಬ್ಯಾನ್ ಮಾಡಲಾಗಿದೆ.
ನ್ಯೂಯಾರ್ಕ್ ಸಿಟಿಯ ಮೇಯರ್ ಎರಿಕ್ ಆಡಮ್ಸ್ ಆಡಳಿತ, ಟಿಕ್ ಟಾಕ್ ನಗರದ ತಾಂತ್ರಿಕ ಜಾಲಗಳಿಗೆ ಭದ್ರತಾ ಬೆದರಿಕೆಗಳನ್ನು ಒಡ್ಡಿದೆ ಎಂದು ತಿಳಿಸಿದೆ. ಈ ಮೂಲಕ ಟಿಕ್ ಟಾಕ್ ಅನ್ನು ನಿರ್ಬಂಧಿಸಿರುವ 24 ರಾಜ್ಯಗಳ ಪಟ್ಟಿಗೆ ನ್ಯೂಯಾರ್ಕ್ ಕೂಡಾ ಸೇರಿಕೊಳ್ಳುತ್ತದೆ ಎಂದು ವರದಿಗಳು ತಿಳಿಸಿವೆ.
ಭಾರತದಲ್ಲಿ ಟಿಕ್ ಟಾಕ್ ಅನ್ನು 2020ರ ಜೂನ್ ನಲ್ಲಿಯೇ ಬ್ಯಾನ್ ಮಾಡಲಾಗಿದೆ.