ದೇಶದೆಲ್ಲೆಡೆ ಗಲಭೆ ಹಬ್ಬಿಸಲು ಬಿಜೆಪಿಯಲ್ಲಿ ಹೊಸ ವಿಭಾಗ ಸ್ಥಾಪನೆ: ಸ್ಫೋಟಕ ಮಾಹಿತಿ ಹೊರಹಾಕಿದ ಸಂಜಯ್ ರಾವುತ್

Prasthutha|

ಮುಂಬೈ: ಬಿಜೆಪಿಯು ದೇಶದ ಎಲ್ಲ ಕಡೆ ಗಲಭೆ ಹುಟ್ಟು ಹಾಕಲೆಂದೇ ತನ್ನ ಪಕ್ಷದ ವಿಭಾಗವೊಂದನ್ನು ಸ್ಥಾಪಿಸಿದೆ ಎಂದು ಶಿವಸೇನೆ ಉದ್ಧವ್ ಬಣದ ಸಂಸದ ಸಂಜಯ ರಾವುತ್ ಹೇಳಿದ್ದಾರೆ.

- Advertisement -


2024ರ ಲೋಕ ಸಭಾ ಚುನಾವಣೆ ವರೆಗೆ ದೇಶಾದ್ಯಂತ ಕೋಮು ಗಲಭೆಗಳನ್ನು ಹುಟ್ಟು ಹಾಕಲು ಬಿಜೆಪಿಯು ಭಾರೀ ದೊಡ್ಡ ಷಡ್ಯಂತ್ರವನ್ನು ರಚಿಸಿದೆ ಎಂದು ಸಂಜಯ್ ರಾವುತ್ ಮುಂಬೈಯಲ್ಲಿ ಪತ್ರಕರ್ತರ ಜೊತೆಗೆ ಮಾತನಾಡುತ್ತ ಹೇಳಿದರು. ಗಲಭೆ ಕಾರಣಕ್ಕೆ ಚುನಾವಣೆ ಮುಂದೂಡಲು ಕೂಡ ಬಿಜೆಪಿಯ ಕೆಲವರು ಲೆಕ್ಕಾಚಾರ ಹಾಕಿದ್ದಾರೆ ಎಂದವರು ಹೇಳಿದರು.
ನಿನ್ನೆ ಹುಬ್ಬಳ್ಳಿಯಲ್ಲಿ ಗಲಭೆ ಪ್ರಚೋದಿಸಿದವರು ಯಾರು? ಮೊನ್ನೆ ಹೌಡಾದಲ್ಲಿ ಗಲಭೆ ನಡೆಸಿದವರು ಯಾರು? ಗಲಭೆ ನಡೆಸಿ, ಅದನ್ನು ಮುಂದಿಟ್ಟು ಚುನಾವಣೆ ಮುಂದೂಡುವ ಕುತಂತ್ರ ಅವರದು. ಅದಾನಿ ತನಿಖೆ ನಡೆಸದಿರುವವರು ಯಾರು? ಎಂದು ಪ್ರಶ್ನಿಸಿದರು.


“ದೇಶದಲ್ಲಿ ಗಲಭೆ ಯಾರು ಮಾಡುತ್ತಾರೆ ಮತ್ತು ಅದರ ಹಿಂದಿರುವವರು ಯಾರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಹುಬ್ಬಳ್ಳಿ, ಹೌಡಾ ಗಲಭೆ ಬಿಜೆಪಿಯವರದು. ಮಹಾರಾಷ್ಟ್ರದಲ್ಲಿ ಗಲಭೆ ಎಬ್ಬಿಸುತ್ತಿರುವವರು ಯಾರು? ಬಿಜೆಪಿಯು ಗಲಭೆ ಎಬ್ಬಿಸಲೆಂದೇ ಪಕ್ಷದಲ್ಲಿ ಒಂದು ವಿಭಾಗ ತೆರೆದಿದೆ. ಈ ವಿಭಾಗಕ್ಕೆ ಗಲಭೆ ಹುಟ್ಟು ಹಾಕುವುದೇ ಕೆಲಸ. 2024ರ ಲೋಕ ಸಭಾ ಚುನಾವಣೆ ಮುಂದೂಡಲು ಅವರ ಯಾವ ಮಟ್ಟದ ಗಲಭೆಗೂ ತಯಾರಿದ್ದಾರೆ” ಎಂದು ಸಂಜಯ್ ರಾವುತ್ ಹೇಳಿದರು.

- Advertisement -


ಪಶ್ಚಿಮ ಬಂಗಾಳದಲ್ಲಿ ಭಾರೀ ಗಲಭೆಗೆ ಸಂಚು ನಡೆಸಿರುವ ಬಿಜೆಪಿ ಹೌಡಾದಲ್ಲಿ ಅದರ ಟ್ರಯಲ್ ನೋಡಿದೆ. “ಮುಂದಿನ ಚುನಾವಣೆಯನ್ನು ಗಲಭೆ ಮೂಲಕವೆ ಗೆಲ್ಲಲು ಬಿಜೆಪಿ ಅಲ್ಲಿ ಲೆಕ್ಕ ಹಾಕಿದೆ. ಕೆಲವು ಕ್ಷೇತ್ರಗಳ ಮೇಲೆ ಕಣ್ಣಿಟ್ಟು ಗಲಭೆ ನಡೆಸಲಾಗುತ್ತದೆ. ರಾಮ ನವಮಿ ಗಲಭೆ ನಡೆಸುವುದಕ್ಕೆ ಇದೆಯೇ? ಆದರೆ ಬಿಜೆಪಿ ಅದನ್ನು ಮಾಡುತ್ತದೆ ಎಂದು ಅವರು ಹೇಳಿದರು.
ಯಾವ್ಯಾವ ರಾಜ್ಯಗಳಲ್ಲಿಯೂ ಚುನಾವಣೆ ನಡೆಯಬೇಕೋ ಅಲ್ಲೆಲ್ಲ ಇವರ ಗಲಭೆ ಇನ್ನಷ್ಟು ಜೋರಾಗಿ ಇರುತ್ತದೆ. ಮಹಾರಾಷ್ಟ್ರದ ಶಿಂಧೆ- ಬಿಜೆಪಿ ಸರಕಾರ ತುಂಬ ದುರ್ಬಲವಾದುದು. ಹಾಗಾಗಿ ಮಹಾರಾಷ್ಟ್ರದಲ್ಲಿ ಗಲಭೆ ಆಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಗಲಭೆ ಮೂಲಕ ಹೆಚ್ಚು ಸ್ಥಾನ ಗೆಲ್ಲಬಹುದು ಎಂದು ಬಿಜೆಪಿ ಲೆಕ್ಕಾಚಾರ. ಈ ಗಲಭೆಕೋರರನ್ನು ಕಿತ್ತೆಸೆಯಿರಿ ಎಂದು ಸಂಜಯ್ ರಾವುತ್ ಹೇಳಿದರು.



Join Whatsapp