ಬಂಟ್ವಾಳ: ಬಂಟ್ವಾಳ ಪುರಸಭೆಯ ಎರಡನೇ ಅವಧಿಯ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಮೂನಿಶ್ ಆಲಿಯವರ ಅಧಿಕಾರ ಸ್ವೀಕಾರ ಕಾರ್ಯಕ್ರಮವು ಬಂಟ್ವಾಳ ಪುರಸಭೆಯ ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಮರ್ಹೂಂ ಮಿತ್ತಬೈಲ್ ಜಬ್ಬಾರ್ ಉಸ್ತಾದರ ಸುಪುತ್ರ ಹಾಗೂ ಎಸ್ ಕೆ ಎಸ್ ಎಸ್ ಎಫ್ ತಾಲೂಕು ಅಧ್ಯಕ್ಷರಾದ ಇರ್ಷಾದ್ ದಾರಿಮಿಯವರು ದುವಾ ಮೂಲಕ ಉದ್ಘಾಟನೆಗೈದು, ‘ಮೂನಿಶ್ ಆಲಿ ಪದಗ್ರಹಣ ನನಗೆ ಸಂತಸ ತಂದಿದೆ. ಸುಸಜ್ಜಿತ ರೀತಿ ನೀತಿಯಿಂದ ಕೂಡಿದ ಈ ಬಗೆಯ ಪದಗ್ರಹಣ ಕಾರ್ಯಕ್ರಮವು ನನಗೆ ಇತಿಹಾಸದಲ್ಲಿ ಮೊದಲ ಅನುಭವ ‘ ಎಂದು ಶ್ಲಾಘಿಸಿದರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್ಎಸ್ಎಫ್ ಕರ್ನಾಟಕ ರಾಜ್ಯ ಮಾಧ್ಯಮ ಕಾರ್ಯದರ್ಶಿಯಾದ ಇರ್ಷಾದ್ ‘ಮೂನಿಶ್ ಅಲಿ ಯವರ ಆಡಳಿತ ಅವಧಿಯಲ್ಲಿ ಬಂಟ್ವಾಳ ಪುರಸಭೆಯು ಒಂದು ಮಾದರಿ ಪುರಸಭೆಯಾಗಿ ಮಾರ್ಪಾಡಾಗುತ್ತೆ’ ಎಂದು ಭರವಸೆಯ ಶುಭ ಹಾರೈಸಿದರು.
ಬಂಟ್ವಾಳ ಜುಮಾ ಮಸೀದಿಯ ಖತೀಬರಾದ ಉಮರ್ ದಾರಿಮಿ ಆತೂರು ರವರು ಮೂನಿಶ್ ಅಲಿಯವರ ರಾಜಕೀಯ ಭವಿಷ್ಯ ಉಜ್ವಲವಾಗಲಿ ಎಂದು ಆಶಿಸಿದರು.
ಎಸ್ ಡಿ ಪಿ ಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಪರಂಗಿಪೇಟೆ ಶುಭಹಾರೈಸಿ, ‘ ಭ್ರಷ್ಟಾಚಾರ ರಹಿತವಾದ ಆಡಳಿತ ನಡೆಸುವ ಬಗ್ಗೆ ಮೊದಲ ಹೇಳಿಕೆಯಲ್ಲಿಯೇ ಮೂನಿಷ್ ಆಲಿಯವರು ದೇವರ ಹೆಸರಿನಲ್ಲಿ ಪ್ರಮಾಣ ಮಾಡಿರುತ್ತಾರೆ. ಇದು ಪಕ್ಷವು ಕಲಿಸಿದ ಪ್ರಾಮಾಣಿಕತೆಗೆ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ಭ್ರಷ್ಟಾಚಾರ ರಹಿತವಾದ ಉತ್ತಮ ಆಡಳಿತವನ್ನು ಬಂಟ್ವಾಳ ಪುರವಾಸಿಗಳಿಗೆ ನೀಡುವಂತಾಗಲಿ ಎಂದು ಶುಭವನ್ನು ಹಾರೈಸಿದರು.
ಈ ಈ ಸಂದರ್ಭದಲ್ಲಿ ಬಂಟ್ವಾಳ ಪುರಸಭೆಯ ನೂತನ ಅಧ್ಯಕ್ಷ ವಾಸು ಪೂಜಾರಿ , ಎಸ್ ಡಿ ಪಿ ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್, ಪುರಸಭಾ ನಿಕಟಪೂರ್ವ ಉಪಾಧ್ಯಕ್ಷೆ ಜಸಿಂತ, ದಲಿತ ಮುಖಂಡ ಹಾಗೂ ಪುರಸಭಾ ಸದಸ್ಯ ಜನಾರ್ದನ ಚಂಡ್ತಿಮಾರ್, ಇದ್ರೀಸ್ ಪಿಜೆ, ಝೀನತ್ ಗೂಡಿನಬಳಿ, ಸಂಶಾದ್ ಗೂಡಿನಬಳಿ, ಪಕ್ಷದ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಶಾಹುಲ್ ಎಸ್ ಎಚ್, ಕಾರ್ಯದರ್ಶಿ ಅಕ್ಬರ್ ಅಲಿ ಪೊನ್ನೋಡಿ, ಮುಸ್ಲಿಂ ಸಮಾಜ ಬಂಟ್ವಾಳ ಇದರ ಕಾರ್ಯದರ್ಶಿ ಶಾಹುಲ್ ಪರ್ಲಿಯಾ, ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ಹಾಜಿ ಅಬ್ದುಲ್ ರಹಿಮಾನ್, ಕಾರ್ಯದರ್ಶಿ ಅಬ್ದುಲ್ ಕಾದರ್ ಮಾಸ್ಟರ್, ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಯೂಸುಫ್ ಆಲಡ್ಕ , ಎಸ್ ಡಿ ಪಿ ಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಸಮಿತಿ ಸದಸ್ಯರಾದ ನವಾಝ್ ಕಟ್ಟೆ, PWD ಕಾಂಟ್ರಾಕ್ಟರ್ ಸಂಘದ ಉಪಾಧ್ಯಕ್ಷರಾದ ಇಕ್ಬಾಲ್ ಜೆಟಿಟಿ ಮತ್ತಿತರ ಕಾರ್ಯಕರ್ತರು, ಹಿತೈಶಿಗಳು ಉಪಸ್ಥಿತರಿದ್ದರು.