ಬೆಂಗಳೂರು: ಕರ್ನಾಟಕ ವಿವಿಧ ವಿಶ್ವವಿದ್ಯಾಲಯಗಳಿಗೆ ನೂತನ ಕುಲಪತಿಗಳನ್ನು ನೇಮಕ ಮಾಡಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಆದೇಶ ಹೊರಡಿಸಿದ್ದಾರೆ.
ಮಂಗಳೂರು, ಬಾಗಲಕೋಟೆ ತೋಟಗಾರಿಕಾ ವಿವಿ, ವಿಜಯನಗರದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ಹಂಪಿ ಕನ್ನಡ ವಿಶ್ವವಿದ್ಯಾಲಯ, ಬೆಳಗಾವಿ ರಾಣಿ ಚೆನ್ನಮ್ಮ ವಿವಿ, ಕುವೆಂಪು ವಿಶ್ವವಿದ್ಯಾಯಲಗಳಿಗೆ ಹೊಸ ಕುಲಪತಿಗಳನ್ನು ನೇಮಿಸಲಾಗಿದೆ.
ಮಂಗಳೂರು ವಿಶ್ವವಿದ್ಯಾಯಲದ ಕುಲಪತಿಯಾಗಿ ಪ್ರೊ.ಪಿ.ಎಲ್.ಧರ್ಮ ಅವರನ್ನು ನೇಮಕ ಮಾಡಲಾಗಿದೆ. ಪ್ರೊ.ಪಿ.ಎಲ್.ಧರ್ಮ ಮಂಗಳೂರು ವಿವಿಯ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದರು.
ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದ ಕುಲಪತಿಯಾಗಿ ಡಾ. ವಿಷ್ಣುವರ್ಧನ್ ಅವರನ್ನು ನೇಮಿಸಲಾಗಿದೆ. ಡಾ.ವಿಷ್ಣುವರ್ಧನ್ ಅವರು ಮೈಸೂರು ತೋಟಗಾರಿಕಾ ಕಾಲೇಜಿನ ಡೀನ್ ಆಗಿದ್ದರು.
ವಿಜಯನಗರದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿಯಾಗಿ ಡಾ.ಮೇತ್ರಿ ನೇಮಕ ಮಾಡಲಾಗಿದೆ.
ಡಾ.ಕೆ.ಎಂ.ಮೇತ್ರಿ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿದ್ದರು.
ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಯಾಗಿ ಪ್ರೊ.ಸಿ.ಎಂ.ತ್ಯಾಗರಾಜ್ ನೇಮಿಸಲಾಗಿದೆ. ತ್ಯಾಗರಾಜ್ ಅವರು ರಾಣಿ ಚೆನ್ನಮ್ಮ ವಿವಿಯ ವಾಣಿಜ್ಯ ವಿಭಾಗದ ಡೀನ್ ಅಗಿದ್ದರು.
ಕುವೆಂಪು ವಿಶ್ವವಿದ್ಯಾಲಯ ಕುಲಪತಿಯಾಗಿ ಪ್ರೊ.ಶರತ್ ಅನಂತಮೂರ್ತಿ ಅವರನ್ನು ನೇಮಕ ಮಾಡಲಾಗಿದೆ. ಶರತ್ ಅನಂತಮೂರ್ತಿ ಅವರು ಹೈದ್ರಾಬಾದ್ ಸ್ಕೂಲ್ ಆಫ್ ಫಿಸಿಕ್ಸ್ ಪ್ರಾಧ್ಯಾಪಕರಾಗಿದ್ದರು.