ಟ್ವಿಟರ್‌ನಲ್ಲಿ ಹೊಸ ಸಮೀಕ್ಷೆ: ಸಿಇಒ ಸ್ಥಾನದಿಂದ ತೆರವಾಗಲಿರುವ ಎಲಾನ್ ಮಸ್ಕ್..?

Prasthutha|

ಪ್ರಿಟೋರಿಯಾ: ಟ್ವಿಟರ್‌ನಲ್ಲಿ ಹೊಸ ಸಮೀಕ್ಷೆ ಆರಂಭಿಸಿರುವ ಎಲಾನ್ ಮಸ್ಕ್ ಟ್ವಿಟರ್‌ನ ಸಿಇಒ ಸ್ಥಾನದಿಂದ ನಾನು ಕೆಳಗಿಳಿಯಬೇಕೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಶ್ನೆಯೊಂದನ್ನು ಹರಿಯಬಿಟ್ಟಿದ್ದು,  ಜನರು ನೀಡುವ ಉತ್ತರಕ್ಕೆ ತಾವು ಬದ್ಧರಾಗಿರುವುದಾಗಿ ಘೋಷಿಸಿದ್ದಾರೆ.

- Advertisement -

‘ಟೆಸ್ಲಾ ಅಥವಾ ಟ್ವಿಟರ್ ಆಗಿರಲಿ… ಯಾವುದೇ ಕಂಪನಿಯ ಸಿಇಒ ಆಗಿರಲು ನಾನು ಬಯಸುವುದಿಲ್ಲ’ ಎಂದು ಮಸ್ಕ್ ಕಳೆದ ತಿಂಗಳು ಹೇಳಿದ್ದರು.

ಇದೀಗ ಟ್ವಿಟರ್‌ನ ಸಾವಿರಾರು ಬಳಕೆದಾರರು ಮಸ್ಕ್‌ ಅವರ ಸಮೀಕ್ಷೆಯಲ್ಲಿ ಪಾಲ್ಗೊಳ್ಳುತ್ತಿದ್ದು, ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.

- Advertisement -

ಎಲಾನ್‌ ಮಸ್ಕ್‌ ಆರಂಭಿಸಿರುವ ಸಮೀಕ್ಷೆಯಲ್ಲಿ ಸೋಮವಾರ ಬೆಳಗ್ಗೆ 10.30ರ ಹೊತ್ತಿಗೆ ಶೇ. 53ರಕ್ಕೂ ಅಧಿಕ ಮಂದಿ, ನೀವು ಸಿಇಒ ಸ್ಥಾನದಿಂದ ಕೆಳಗಿಳಿಯಬೇಕು ಎಂದೇ ಉತ್ತರಿಸಿದ್ದಾರೆ.

Join Whatsapp