ಸೆಂಟ್ರಲ್ ವಿಸ್ತಾ ಯೋಜನೆಯ ವೆಚ್ಚ 1250 ಕೋಟಿ ರೂ. ಗೆ ಏರಿಕೆ!

Prasthutha|

ಶೇಕಡಾ 29ರಷ್ಟು ಬಜೆಟ್ ಹೆಚ್ಚಳ

- Advertisement -

ಹೊಸದಿಲ್ಲಿ: ಸರಕು ಬೆಲೆ ಹೆಚ್ಚಳದಿಂದಾಗಿ ನೂತನ ಸಂಸತ್ ಭವನ ಕಟ್ಟಡ ಸೆಂಟ್ರಲ್ ವಿಸ್ತಾದ ಯೋಜನೆಯಲ್ಲಿ ಶೇಕಡಾ 29ರಷ್ಟು ಬಜೆಟ್ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಉಕ್ಕು, ಎಲೆಕ್ಟ್ರಾನಿಕ್ಸ್ ವಸ್ತು ಮತ್ತು ಸಿಮೆಂಟ್ ಸಹಿತ ಕಚ್ಚಾ ಸರಕು ಬೆಲೆ ಹೆಚ್ಚಳದಿಂದಾಗಿ ನೂತನ ಸಂಸತ್ ಭವನ ಕಟ್ಟಡ ನಿರ್ಮಾಣದ ವೆಚ್ಚದಲ್ಲಿ ₹250 ಕೋಟಿ ಏರಿಕೆಯಾಗಲಿದೆ.

- Advertisement -

2020ರಲ್ಲಿ ಟಾಟಾ ಪ್ರಾಜೆಕ್ಟ್ಸ್‌ಗೆ ನೂತನ ಸಂಸತ್ ಭವನ ನಿರ್ಮಾಣದ ಹೊಣೆಯನ್ನು ವಹಿಸಲಾಗಿತ್ತು. ಅಲ್ಲದೆ, ಆ ಸಂದರ್ಭದಲ್ಲಿ ₹971 ಕೋಟಿ ವೆಚ್ಚಕ್ಕೆ ಅನುಮೋದನೆ ದೊರೆತಿತ್ತು. ಆದರೆ ಕಚ್ಚಾ ಸಾಮಾಗ್ರಿ ದರ ಹೆಚ್ಚಳದಿಂದಾಗಿ, ಪ್ರಸ್ತುತ ಯೋಜನಾ ವೆಚ್ಚ ಅಂದಾಜು ₹1,250 ಕೋಟಿಗೆ ಏರಿಕೆಯಾಗಲಿದೆ.

ಸರ್ಕಾರ, ನೂತನ ಕಟ್ಟಡ ನಿರ್ಮಾಣಕ್ಕೆ 2022ರ ಅಕ್ಟೋಬರ್ ಗಡುವನ್ನು ವಿಧಿಸಿದ್ದು, ಸಂಸತ್‌ನ ಚಳಿಗಾಲದ ಅಧಿವೇಶನವನ್ನು ಹೊಸ ಸಂಸತ್ ಭವನದಲ್ಲೇ ನಡೆಸುವುದಾಗಿ ಉದ್ದೇಶಿಸಲಾಗಿದೆ.

Join Whatsapp