ಮಂಗಳೂರು: ಮಾರ್ಚ್ 23 ರಿಂದ ನೂತನ ಕುಳಾಯಿ ಮೀನುಗಾರಿಕಾ ಬಂದರಿನ ಕಾಮಗಾರಿ ಆರಂಭ

Prasthutha|

ಮಂಗಳೂರು: ನಗರದ ಕುಳಾಯಿಯಲ್ಲಿ ನಿರ್ಮಾಣವಾಗಲಿರುವ ನೂತನ ಮೀನುಗಾರಿಕಾ ಬಂದರಿನ ಕಾಮಗಾರಿಗೆ ನವ ಮಂಗಳೂರು ಬಂದರು ಪ್ರಾಧಿಕಾರವು ಕಾರ್ಯಾದೇಶವನ್ನು ಹೊರಡಿಸಿದೆ. ಬ್ರೇಕ್ ವಾಟರ್, ಡ್ರೆಜ್ಜಿಂಗ್ ಹಾಗೂ ನಿರ್ಮಾಣ ಕಾಮಗಾರಿಗಳಿಗಾಗಿ ಮಂಗಳೂರಿನ SAPL GCC JV ಸಂಸ್ಥೆಗೆ ಗುತ್ತಿಗೆ ವಹಿಸಿಕೊಡಲಾಗಿದೆ.

- Advertisement -

ಮಾರ್ಚ್ 23ರಿಂದ ಕಾಮಗಾರಿ ಚಟುವಟಿಕೆ ಆರಂಭವಾಗಲಿದ್ದು 2025ರ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಹೊಂದಲಾಗಿದೆ. ಪ್ರಧಾನ ಮಂತ್ರಿಯವರ ‘ಗತಿ ಶಕ್ತಿ’ ಯೋಜನೆಯಡಿ ಕಾಮಗಾರಿ ನಡೆಯಲಿದ್ದು, ಇದರಿಂದಾಗಿ ಕರಾವಳಿಯ ಸಮುದ್ರ ಮೀನುಗಾರಿಕೆಗೆ ಇನ್ನಷ್ಟು ಅವಕಾಶ ಸಿಗಲಿದ್ದು, ಸ್ಥಳೀಯ ಮೀನುಗಾರರಿಗೂ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದು ನವ ಮಂಗಳೂರು ಬಂದರು ಪ್ರಾಧಿಕಾರ ಡಾ.ಎವಿ ರಮಣ ತಿಳಿಸಿದ್ದಾರೆ.

ಕುಳಾಯಿಯಲ್ಲಿ ನೂತನ ಮೀನುಗಾರಿಕಾ ಬಂದರು ನಿರ್ಮಾಣದಿಂದ ದೇಶೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮೀನಿನ ವ್ಯಾಪಾರಗಳನ್ನು ಹೆಚ್ಚಿಸುವ ನಿರೀಕ್ಷೆ ಹೊಂದಲಾಗಿದೆ. ಹಾಗೂ ಸ್ಥಳೀಯ ಮೀನುಗಾರರಿಗೆ ಉದ್ಯೋಗ ಮತ್ತು ಆರ್ಥಿಕವಾಗಿ ಸಬಲೀಕರಣಗೊಳ್ಳುವ ಕುರಿತು ಅಂದಾಜಿಸಲಾಗಿದೆ.  



Join Whatsapp