ಮೈಕ್ರೋ ಫೈನಾನ್ಸ್​ ನಿಯಂತ್ರಣಕ್ಕೆ ಸುಗ್ರೀವಾಜ್ಞೆ ಮೂಲಕ ಹೊಸ ಕಾನೂನು: ಸಿಎಂ ಸಿದ್ದರಾಮಯ್ಯ

Prasthutha|

ಬೆಂಗಳೂರು: ಮೈಕ್ರೋ ಫೈನಾನ್ಸ್ ಕಂಪನಿಗಳು ಮತ್ತು ಖಾಸಗಿ ಲೇವಾದೇವಿ ಸಂಸ್ಥೆಗಳಿಂದ ಸಾಲ ಪಡೆದವರ ರಕ್ಷಣೆಗಾಗಿ ಸುಗ್ರೀವಾಜ್ಞೆ ಮೂಲಕ ತಕ್ಷಣವೇ ಹೊಸ ಕಾನೂನು ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

- Advertisement -

‘ಮೈಕ್ರೋ ಫೈನಾನ್ಸ್ ಕಂಪನಿಗಳ ಪ್ರತಿನಿಧಿಗಳ ಜೊತೆ ಶನಿವಾರ ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಮೈಕ್ರೋ ಫೈನಾನ್ಸ್ ಹಾಗೂ ಆರ್‌ಬಿಐ ಅವರ ಅಭಿಪ್ರಾಯ ಕೇಳಿದ್ದೇನೆ. ಸಾಲ ಕೊಡಬೇಡಿ ಎಂದು ನಾವು ಹೇಳಲ್ಲ, ವಸೂಲಿ ಮಾಡಬೇಡಿ ಎಂದೂ ಹೇಳಲ್ಲ.‌ ಆದರೆ ವಸೂಲಿ ಮಾಡುವಾಗ ಕಿರುಕುಳ ಕೊಡಬಾರದು’ ಎಂದರು.

‘ಸಾಲ ವಸೂಲಿ ಮಾಡುವಾಗ ರಿಸರ್ವ್ ಬ್ಯಾಂಕಿನ ನಿಯಮ ಪಾಲಿಸಬೇಕು.‌ ಐದು ಗಂಟೆಯ ಬಳಿಕ ವಸೂಲಿ ಮಾಡಲು ಹೋಗಬಾರದು.‌ ಸಾಲ ವಸೂಲಾತಿಗೆ ಹೊರಗಿನವರನ್ನು. ಅಂದರೆ ಗೂಂಡಾಗಳನ್ನು ಬಳಕೆ ಮಾಡಬಾರದು.‌ ಈ‌ ರೀತಿ ಮಾಡುವವರ ಮೇಲೆ ಸರ್ಕಾರ ಕ್ರಮ ಕೈಗೊಳ್ಳಲಿದೆ’ ಎಂದು ಎಚ್ಚರಿಕೆ ನೀಡಿದರು.

- Advertisement -

‘ಸಾಲ ವಸೂಲಾತಿ ವೇಳೆ ಕಾನೂನು ಉಲ್ಲಂಘನೆ ಮಾಡಿದರೆ ಅಂತವರ ಮೇಲೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ತೇವೆ ಎಂದು ನಬಾರ್ಡ್ ಹಾಗೂ ಮೈಕ್ರೋ ಫೈನಾನ್ಸ್ ಸಂಸ್ಥೆಗೆ, ಮನಿ ಲೆಂಡಿಂಗ್ ಮಾಡುವವರಿಗೆ ಎಚ್ಚರಿಕೆ ಕೊಟ್ಟಿದ್ದೇವೆ.‌ ಇದಕ್ಕಾಗಿ ಹೊಸ ಕಾನೂನು ಮಾಡ್ತೇವೆ’ ಎಂದರು.



Join Whatsapp