ನವದೆಹಲಿ: ಕೇರಳದ ಮೀಡಿಯಾ ಒನ್ ಸುದ್ದಿವಾಹಿನಿ ಮೇಲೆ ಕೇಂದ್ರ ಸರ್ಕಾರ ಹೇರಿದ ನಿಷೇಧಕ್ಕೆ ಸುಪ್ರೀಮ್ ಕೋರ್ಟ್ ತಡೆ ನೀಡಿದೆ.
ಮೀಡಿಯಾ ಒನ್ ಸುದ್ದಿವಾಹಿನಿ ಮೇಲಿನ ಪ್ರಸಾರ ನಿಷೇಧದ ವಿರುದ್ಧ ಚಾನೆಲ್‌ನ ಮೇಲ್ಮನವಿಯನ್ನು ಪರಿಗಣಿಸಲು ಈ ಹಿಂದೆ ಸುಪ್ರೀಂಕೋರ್ಟ್ ಸಮ್ಮತಿಸಿತ್ತು.
ಕೇರಳ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಮೀಡಿಯಾ ಒನ್ ವಾಹಿನಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಮ್ ಕೋರ್ಟ್ ಇಂದು ಪ್ರಸಾರ ನಿಷೇಧಕ್ಕೆ ತಡೆ ನೀಡಿದೆ.
ಸರಿಯಾದ ದಾಖಲೆಗಳನ್ನು ಒದಗಿಸದೆ ರಾಷ್ಟ್ರೀಯ ಭದ್ರತಾ ಅಪಾಯದ ಕಾರಣಗಳನ್ನು ನೀಡಿ ಮೀಡಿಯಾ ಒನ್ ಸುದ್ದಿವಾಹಿನಿಯ ಪ್ರಸಾರ ಲೈಸೆನ್ಸ್ ಅನ್ನು ನವೀಕರಿಸಲು ಕೇಂದ್ರ ಸರ್ಕಾರದ ಅಧೀನದಲ್ಲಿರುವ ವಾರ್ತಾ ಇಲಾಖೆ ನಿರಾಕರಿಸಿತ್ತು.