ದೆಹಲಿ: ಕ್ರೈಸ್ತ ಪಾದ್ರಿಗೆ ‘ಜೈ ಶ್ರೀರಾಮ್ ಘೋಷಣೆ’ ಕೂಗುವಂತೆ ಬಲವಂತಪಡಿಸಿ ಸಂಘಪರಿವಾರದ ಕಾರ್ಯಕರ್ತರಿಂದ ಹಲ್ಲೆ

Prasthutha|

ನವದೆಹಲಿ: ದೆಹಲಿಯ ಫಹೇಹ್ ಪುರಿಯಲ್ಲಿ ಸಂಘಪರಿವಾರದ ಕಾರ್ಯಕರ್ತರು ಮತಾಂತರದ ಆರೋಪ ಹೊರಿಸಿ ಕ್ರೈಸ್ತ ಪಾದ್ರಿಯ ಮೇಲೆ ‘ಜೈ ಶ್ರೀರಾಮ್ ಘೋಷಣೆ’ ಕೂಗುವಂತೆ ಬಲವಂತಪಡಿಸಿ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ.

- Advertisement -

ಘಟನೆಗೆ ಸಂಬಂಧಿಸಿದಂತೆ ಮೈದಾನ ಗರ್ಹಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಈ ಕುರಿತ ವೀಡಿಯೋವೊಂದನ್ನು ಹಿರಿಯ ಪತ್ರಕರ್ತೆಯೊಬ್ಬರು ಸಾಮಾಜಿಕ ಹಂಚಿಕೊಂಡಿದ್ದು, ಕ್ರೈಸ್ತರ ಪಾದ್ರಿಯನ್ನು ವಿಭಾಜಕ್ಕೆ ಕಟ್ಟಿ ಹಾಕಿದ ಸಂಘಪರಿವಾರದ ಕಾರ್ಯಕರ್ತರು ಪ್ರಶ್ನಿಸುತ್ತಿರುವುದು ಅದರಲ್ಲಿ ಸೆರೆಯಾಗಿದೆ.

- Advertisement -

ಸದ್ಯ ಪಾದ್ರಿ ಅವರು ದಕ್ಷಿಣ ದಿಲ್ಲಿಯ ಅಸೋಲ ಎಂಬಲ್ಲಿ ಕಳೆದ 18 ವರ್ಷಗಳಿಂದ ವಾಸಿಸುತ್ತಿದ್ದು, ಅವರನ್ನು ಗುರಿಯಾಗಿಸಿ ಹಿಂದೊಮ್ಮೆ ಸಂಜಯ್ ಕಾಲನಿಯಲ್ಲಿ ಅಪರಿಚಿತರು ಹಲ್ಲೆ ನಡೆಸಿದ್ದರು.

ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಪಾದ್ರಿ ನೀಡಿದ್ದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

Join Whatsapp