ಬೆಂಗಳೂರು: ಲಾಕ್ಡೌನ್ ನಿಂದಾಗಿ ತೀವ್ರ ನಷ್ಟ ಅನುಭವಿಸಿದ್ದ ಹೋಟೆಲ್ ಉದ್ಯಮಿಗಳಿಗೆ ಇದೀಗ ಸರ್ಕಾರ ಕೈಗೊಂಡಿರುವ ನಿರ್ಧಾರವು ಮತ್ತಷ್ಟು ಸಂಕಷ್ಟವನ್ನುಂಟುಮಾಡಿದೆ.
ವರ್ಕ್ ಫ್ರಂ ಹೋಮ್ ಆರಂಭವಾದಂದಿನಿಂದ ಕಾರ್ಪೊರೇಟ್ ಆಫೀಸ್ಗಳಲ್ಲಿ ವಿದ್ಯುತ್ ಬಳಕೆ ತೀರಾ ಕಡಿಮೆ ಯಾಗಿದ್ದು ಹೆಚ್ಚಿನ ಪ್ರಮಾಣದ ಉಳಿಕೆಯಾಗುತ್ತಿದೆ. ಹೀಗೆ ಬಳಕೆಯಾಗದೆ ಉಳಿತಾಯವಾದ ವಿದ್ಯುತ್ನ್ನು ಸರ್ಕಾರ ನೆರೆ ರಾಜ್ಯಗಳಿಗೆ ಯೂನಿಟ್‌ಗೆ ಕೇವಲ 3 ರೂಪಾಯಿಯಂತೆ ಮಾರಾಟ ಮಾಡುತ್ತಿದೆ. ಆದರೆ ನಮ್ಮ ರಾಜ್ಯದ ಉದ್ಯಮಗಳಿಗೆ ಯೂನಿಟ್ಗೆ ಬರೊಬ್ಬರಿ 7ರಿಂದ 9 ರೂಪಾಯಿ ಈಡಾಗುತ್ತಿದೆ ಎಂದು ಹೊಟೇಲ್ ಮಾಲಿಕರ ಅಸೋಸಿಯೇಶನ್ ಆಕ್ರೋಶ ವ್ಯಕ್ತಪಡಿಸಿದೆ.
ನೆರೆ ರಾಜ್ಯಗಳಿಗೆ 3ರೂಪಾಯಿಗೆ ವಿದ್ಯುತ್ ಕೊಡುವ ಬದಲು 5 ರೂಪಾಯಿಗೆ ನಮಗೆ ಕೊಟ್ಟು ವಿದ್ಯುತ್ ಮೇಲಿನ ತೆರಿಗೆಯನ್ನು ಶೇಕಡಾ 9ರಿಂದ ಶೇಕಡಾ 4ಕ್ಕೆ ಇಳಿಸಬೇಕು .ಇದರಿಂದ ನಮ್ಮ ಉದ್ಯಮಗಳ ಉತ್ಪಾದನೆಯೂ ಹೆಚ್ಚಲು ಸಹಕಾರಿಯಾಗುತ್ತದೆ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಒಟ್ಟಿನಲ್ಲಿ ರಾಜ್ಯದ ವಾಣಿಜ್ಯೋದ್ಯಮಗಳಿಗೆ ಹೆಚ್ಚಿನ ದರದಲ್ಲಿ ವಿದ್ಯುತ್ ಮಾರಾಟ ಮಾಡಿ, ನೆರೆ ರಾಜ್ಯಗಳಿಗೆ ಕಡಿಮೆ ದರದಲ್ಲಿ ಮಾರುವ ಅವಶ್ಯಕತೆ ಏನಿದೆ? ಎಂಬ ಪ್ರಶ್ನೆ ಉಂಟಾಗಿದೆ