ಹೊಸ ಕೋವಿಡ್ ಉಪತಳಿ ಪತ್ತೆ: ಪ್ರಧಾನ ಮಂತ್ರಿ ಕಚೇರಿಯಲ್ಲಿ ಸಭೆ

Prasthutha|

ನವದೆಹಲಿ: ಬ್ರಿಟನ್, ಯುರೋಪ್ ಸೇರಿದಂತೆ ಹಲವೆಡೆ ಪತ್ತೆಯಾಗಿರುವ ಹೊಸ ಕೋವಿಡ್ ಉಪತಳಿ ಕುರಿತು ಪ್ರಧಾನಮಂತ್ರಿಗಳ ಸಚಿವಾಲಯ ಮುನ್ನೆಚ್ಚರಿಕೆ ವಹಿಸಿದ್ದು, ಈ ಸಂಬಂಧ ಪರಿಸ್ಥಿತಿ ಅವಲೋಕನ ಕುರಿತು ಉನ್ನತ ಮಟ್ಟದ ಸಭೆ ನಡೆಸಲಾಗಿದೆ.

- Advertisement -


ಪ್ರಧಾನ ಮಂತ್ರಿ ಅವರ ಪ್ರಧಾನ ಕಾರ್ಯದರ್ಶಿಯಾದ ಪಿಕೆ ಮಿಶ್ರಾ, ನೇತೃತ್ವದಲ್ಲಿ ಸಂಬಂಧಿಸಿದ ಅಧಿಕಾರಿಗಳಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದು, ಜಾಗತಿಕ ಮತ್ತು ರಾಷ್ಟ್ರ ಮಟ್ಟದಲ್ಲಿನ ಕೋವಿಡ್ ಪರಿಸ್ಥಿತಿಗಳ ಕುರಿತು ಅವಲೋಕನ ನಡೆಸಲಾಯಿತು. ಇದೇ ವೇಳೆ, ಹೊಸ ಉಪ ತಳಿಯು ಸಾರ್ವಜನಿಕ ಆರೋಗ್ಯದ ಮೇಲೆ ಬೀರುವ ಪರಿಣಾಮ ಕುರಿತು ಚರ್ಚಿಸಲಾಯಿತು.


ಕಳೆದ ಏಳು ದಿನಗಳಿಂದ ಜಾಗತಿಕವಾಕವಾಗಿ 2,96,219 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದೆ. ಇದು ಸುಮಾರು ಜಾಗತಿಕ ಜನಸಂಖ್ಯೆಯ ಶೇ 17ರಷ್ಟಿದೆ. ಭಾರತದಲ್ಲಿ ನಿತ್ಯ ಹೊಸ ಕೋವಿಡ್ ಪ್ರಕರಣಗಳು ಕೇವಲ 50ಕ್ಕಿಂತ ಕಡಿಮೆ ದಾಖಲಾಗುತ್ತಿದೆ.



Join Whatsapp