ಗೋಲ್ಡನ್ ಪಾಯಿಂಟ್ ನಲ್ಲಿ ನೂತನ ಕಾಂಕ್ರೀಟ್ ರಸ್ತೆ ಉದ್ಘಾಟನೆ

Prasthutha|

ಮಂಗಳೂರು: ಇಲ್ಲಿನ ಬಂದರು 45 ನೇ ಪೋರ್ಟ್ ವಾರ್ಡಿನ ಗೋಲ್ಡನ್ ಪಾಯಿಂಟ್ ಬಳಿ ಕಾರ್ಪೊರೇಟರ್ ನಿಧಿಯಿಂದ ನೂತನವಾಗಿ ನಿರ್ಮಿಸಿರುವ ಕಾಂಕ್ರೀಟ್ ರಸ್ತೆಯನ್ನು ಮಂಗಳೂರು ಮಹಾನಗರ ಪಾಲಿಕೆ ಕಾರ್ಪೊರೇಟರ್ ಅಬ್ದುಲ್ ಲತೀಫ್ ಶನಿವಾರ ಉದ್ಘಾಟಿಸಿದರು.

- Advertisement -

ಬಳಿಕ ಮಾತನಾಡಿದ ಅಬ್ದುಲ್ ಲತೀಫ್, ವಾರ್ಡ್ ನ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮತ್ತು ತಾರತಮ್ಯ  ಮಾಡುವುದಿಲ್ಲ. ವಾರ್ಡ್ ನ ಎಲ್ಲ ಜನರ ವಿಶ್ವಾಸಗಳಿಸಿ ಕೆಲಸ ಮಾಡುತ್ತಿದ್ದೇನೆ. ಮುಂದೆಯೂ ಇದೇ ರೀತಿಯ ವಿಶ್ವಾಸ ಇರಲಿ ಎಂದರು.

ಪಾಲಿಕೆಯ ಸದಸ್ಯನಾಗಿ ಆಯ್ಕೆಯಾದ ಬಳಿಕ ಜನರ ಸೇವೆ ಮಾಡುವುದು, ಅಭಿವೃದ್ಧಿ ಕೆಲಸ ಮಾಡುವುದು, ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ನನ್ನ ಕರ್ತವ್ಯ. ಅದನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ. ಹಳೆ ಬಂದರು ಅಭಿವೃದ್ಧಿ ಕೆಲಸಗಳನ್ನು ವಹಿಸಿಕೊಳ್ಳಲು ಗುತ್ತಿಗೆದಾರರು ಮುಂದೆ ಬರುತ್ತಿಲ್ಲ. ಕಟ್ಟಡ ಮಾಲೀಕರು ಅಡ್ಡಿ ಪಡಿಸುತ್ತಾರೆ, ನೋಟಿಸ್ ನೀಡುತ್ತಾರೆ ಎಂಬ ಆರೋಪ ಇದೆ. ಇದು ಸರಿಯಲ್ಲ. ಎಲ್ಲರ ಸಹಕಾರ ದೊರೆತರೆ ಬಂದರು ಪೊಲೀಸ್ ಠಾಣೆಯಿಂದ ಬದ್ರಿಯಾ ಕಾಲೇಜು ವರೆಗೆ ಸುಸಜ್ಜಿತ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುವುದು. ಇಂಜಿನಿಯರ್ ಕೂಡ ನಮ್ಮ ಕೆಲಸ ಕಾರ್ಯಗಳಿಗೆ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.

- Advertisement -

ಇದೇ ವೇಳೆ ಗೋಲ್ಡನ್ ಅಪಾರ್ಟ್ಮೆಂಟ್ ಅಸೋಸಿಯೇಶನ್ ವತಿಯಿಂದ ಕಾರ್ಪೊರೇಟ್ ಅಬ್ದುಲ್ ಲತೀಫ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯ ಕ್ರಮದಲ್ಲಿ ಯುವ ಉದ್ಯಮಿ, ಗೋಲ್ಡನ್ ಅಪಾರ್ಟ್ಮೆಂಟ್ ಮಾಲೀಕ ಗೋಲ್ಡನ್ ಶರೀಫ್ , ಪಾಲಿಕೆ ಇಂಜಿನಿಯರ್ ಮಿಥುನ್, ಉದ್ಯಮಿ ಝಕರಿಯಾ, ಮುಖಂಡರಾದ ಅಲ್ತಾಫ್, ಆದಿಲ್, ಅಬ್ದುಲ್ ಹಕೀಮ್, ಶುಕೂರ್, ನೌಶಾದ್ ಮತ್ತಿತರರು ಉಪಸ್ಥಿತರಿದ್ದರು.



Join Whatsapp