ರಾಮಮಂದಿರ ನಿರ್ಮಾಣಕ್ಕೆ ಎಂದಿಗೂ ವಿರೋಧವಿಲ್ಲ: ಸಿಎಂ ಸಿದ್ದರಾಮಯ್ಯ

Prasthutha|

ಬೆಂಗಳೂರು: ರಾಮ ಮಂದಿರಕ್ಕೆ ನಮ್ಮ ಸರ್ಕಾರ ಮತ್ತು ಪಕ್ಷದ ಸಂಪೂರ್ಣ ಬೆಂಬಲವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

- Advertisement -

ಅಯೋಧ್ಯೆ ರಾಮಮಂದಿರ ಉದ್ಘಾಟನೆ ವಿಚಾರವನ್ನು ಬಿಜೆಪಿ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿರುವ ಬೆನ್ನಲ್ಲೇ ರಾಮ ಮಂದಿರದ ಪರ ಹೇಳಿಕೆ ನೀಡಿರುವ ಸಿದ್ದರಾಮಯ್ಯ, ರಾಮಮಂದಿರವನ್ನು ನಾವು ವಿರೋಧಿಸಲ್ಲ, ಮಂದಿರ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ. ನಾವು ರಾಮಮಂದಿರದ ಪರವಾಗಿದ್ದೇವೆ ಎಂದರು.

 ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ನಮ್ಮ ವಿರುದ್ಧವಿಲ್ಲ. ದೇವಸ್ಥಾನ ಕಟ್ಟುವುದಕ್ಕೂ ನನ್ನ ವಿರೋಧ ಇಲ್ಲ. ನಮ್ಮ ಊರಿನಲ್ಲಿ ರಾಮಮಂದಿರ ಕಟ್ಟಿಸಿದ್ದಾರೆ. ನಾನು ಶ್ರೀರಾಮನನ್ನು ಎಂದಿಗೂ ವಿರೋಧಿಸುವುದಿಲ್ಲ. ನಾನು ರಾಮಾಂಜನೇಯ ಭಕ್ತ. ನಾನು ನನ್ನ ಊರಿನಲ್ಲಿ ಬಿಡುವಿದ್ದಾಗಲೆಲ್ಲ ಅನೇಕ ಸಂಕೀರ್ತನೆಗಳು ಮತ್ತು ಭಜನೆಗಳಲ್ಲಿ (ಭಕ್ತಿಗೀತೆಗಳು) ಭಾಗವಹಿಸಿದ್ದೇನೆ. ನಾನು ರಾಮನ ಪರವಾಗಿದ್ದೇವೆ. ರಾಮ ಮಂದಿರವನ್ನು ಕಟ್ಟಿರುವುದು ಬಹಳ ಸಂತೋಷ ವಿಷಯ ಎಂದು ಹೇಳಿದರು.

Join Whatsapp